15.13 ಲಕ್ಷ ಲಾಭ, ಶೇ. 4 ಡಿವಿಡೆಂಡ್ ಘೋಷಣೆ
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯು ಡಿಸೆಂಬರ್ 2ರಂದು ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘವು ವರದಿ ಸಾಲಿನಲ್ಲಿ 15.13ಲಕ್ಷ ಲಾಭವನ್ನು ಹೊಂದಿದ್ದು, ಸದಸ್ಯರಿಗೆ ಶೇ. 4ರಷ್ಟು ಡಿವಿಡೆಂಟ್ ಹಂಚುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಲೋಕನಾಥ ಅಮೆಚೂರು, ತೇಜಪ್ರಸಾದ್ ಅಮೆಚೂರು, ಹೊನ್ನಪ್ಪ ಕೊಳಂಗಾಯ, ಹೊನ್ನಪ್ಪ ಅಮೆಚೂರು, ಆನಂದ ಆರ್.ಡಿ., ನಂಜಪ್ಪ ನಿಡ್ಯಮಲೆ, ಕೆ.ಬಿ.ಚಂದ್ರಶೇಖರ್, ಧನಂಜಯ ಕೋಡಿ, ಪುಂಡರೀಕ ಹೊದ್ದೆಟ್ಟಿ ಮೊದಲಾದವರು ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.
ಅಧ್ಯಕ್ಷ ಮೋನಪ್ಪ ಎನ್. ಬಿ., ನಿರ್ದೇಶಕರುಗಳಾದ ಅಶೋಕ ಪಿ ಎಂ., ಪ್ರಸನ್ನ ನೆಕ್ಕಿಲ, ಗಾಂಧಿ ಪ್ರಸಾದ್ ಬಂಗಾರಕೋಡಿ, ದೀನರಾಜ ದೊಡ್ಡಡ್ಕ, ಜಯರಾಮ ಪಿ.ಟಿ., ಶೇಷಪ್ಪ ನಾಯ್ಕ ನಿಡ್ಯಮಲೆ, ಪ್ರಮೀಳಾ ಎನ್. ಬಂಗಾರಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ.ಎ., ದಾಸಪ್ಪ ಮಡಿವಾಳ ಮತ್ತು ಕಿರಣ ಬಂಗಾರಕೋಡಿಯವರು ಉಪಸ್ಥಿತರಿದ್ದರು. ವಿಶ್ವದೀಪ್ ಕುಂದಲ್ಪಾಡಿ ಪ್ರಾರ್ಥಿಸಿದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೆಚ್. ಕೆ. ಸ್ವಾಗತಿಸಿ, ನಿರ್ದೇಶಕಿ ಪ್ರಮೀಳಾ ಎನ್ ಬಂಗಾರಕೋಡಿ ವಂದಿಸಿದರು.