ಕಲ್ಮಕಾರು ಶಾಲಾ ಮುಖ್ಯೋಪಾಧ್ಯಾಯಿನಿ ಬೊಳಿಯಮ್ಮ ಡಿ. ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಲ್ಮಕಾರು ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬೊಳಿಯಮ್ಮ ಡಿ ಯವರು ನ.30 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಕೊಲ್ಲಮೊಗ್ರು ಗ್ರಾಮದ ಚಾಂತಾಳದವರಾಗಿರುವ ಇವರು 1982 ರಲ್ಲಿ ಭೂತಕಲ್ಲು ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕದ ವರ್ಷಗಳಲ್ಲಿ ಮೈತಡ್ಕ ಕಿ.ಪ್ರಾ.ಶಾಲೆ, ದೇವಚಳ್ಳ ಹಿ.ಪ್ರಾ.ಶಾಲೆ, ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಇಲ್ಲಿ ಸೇವೆ ಸಲ್ಲಿಸಿದರು. 2008  ರಿಂದ ವಳಲಂಬೆ ಹಿ.ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಆರಂಭಿಸಿ, 2014 ರಿಂದ ಕಲ್ಮಕಾರು ಶಾಲೆಗೆ ವರ್ಗಾವಣೆಗೊಂಡರು. ಒಟ್ಟು 38ವರ್ಷಗಳ ಸೇವೆಯನ್ನು ಸಲ್ಲಿಸಿರುವ ಇವರು ತಮ್ಮ ಸೇವಾವಧಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ, ಪ್ರತಿಭಾ ಕಾರಂಜಿಗಳನ್ನು ಆಯೋಜಿಸಿರುತ್ತಾರೆ.

 


ಅಲ್ಲದೆ ರಂಗ ಮಂದಿರ ನಿರ್ಮಾಣ ಮಾಡಿರುವುದು, ಪ್ರತಿ ಎರಡು ವರ್ಷಕೊಮ್ಮೆ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ, ಶಾಲಾ ಆವರಣ, ಅಡಿಕೆ ತೋಟ ನಿರ್ಮಾಣ, ಹಸಿರು ವನ, ತರಕಾರಿ ಕೈತೋಟ ನಿರ್ಮಾಣ, ಮೆಡಿಕಲ್ ಕ್ಯಾಂಪ್ ಮಾಡಿಸುವಲ್ಲಿ ಶ್ರಮಿಸಿದ್ದಾರೆ. ಕಲ್ಮಕಾರು ಶಾಲೆಗೆ ೨೦೧೪ ರಲ್ಲಿ ಕೆ.ವಿ.ಜಿ ಸ್ವಚ್ಚತಾ ಪ್ರಶಸ್ತಿ ಲಭಿಸಿರುವುದು ಇವರ ಹೆಗ್ಗಳಿಕೆ. ಬೊಳಿಯಮ್ಮ ಡಿ.ಯವರು ಮೂಲತಃ ಮಂಡೆಕೋಲು ಗ್ರಾಮದ ದೇವರಗುಂಡ ಮನೆತನದವರು. ಇವರ ಪತಿ ನಿವೃತ್ತ ಮುಖ್ಯೋಪಾಧ್ಯಾಯ ಗಣಪತಿ ಗೌಡ ಚಾಂತಾಳ. ೨೦೧೪ ರಲ್ಲಿ ಕಲ್ಮಕಾರು ಶಾಲೆಯಲ್ಲಿ ನಿವೃತ್ತಿ ಹೊಂದಿದ್ದರು. ಮಗ ಸಚಿನ್ ಸಿ.ಜಿ. ಅಡ್ಕಾರ್ ನಲ್ಲಿರುವ ನೇಸರ ಮಿನರಲ್ ವಾಟರ್ ಮಾಲಕ. ಮತ್ತೊಬ್ಬ ಮಗ ಸವಿನ್ ಸಿ.ಜಿ ಮಡಿಕೇರಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.