ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾವಿನ್ ಟ್ರೋಲ್ ಫ್ರೀ ನಂಬರ್  ಲೋಕಾರ್ಪಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

 ಮಿಸ್ ಕಾಲ್ ನೀಡಿ, ಬಹುಮಾನ ಗೆಲ್ಲಿ ಕಾರ್ಯಕ್ರಮಕ್ಕೆ ಸಚಿವ ಎಸ್. ಸುರೇಶ್ ಕುಮಾರ್ ಚಾಲನೆ

 ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾವಿನ್ ಟ್ರೋಲ್ ಫ್ರೀ ನಂಬರ್ 1800 5724920 ಸರ್ವ ಶಿಕ್ಷಣ ಅಭಿಯಾನ ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.

 


ಆನ್‌ಲೈನ್ ಶಿಕ್ಷಣ – ಕಲಿಕಾ ಮಟ್ಟ ಅರಿಯುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೋವಿಡ್ ಮಹಾಮಾರಿ ಎಲ್ಲಾ ಕ್ಷೇತ್ರಗಳ ಮೇಲೂ ಕರಾಳ ಛಾಯೆ ಬೀರಿದೆ. ಶಿಕ್ಷಣ ಕ್ಷೇತ್ರ, ಶಾಲೆಗಳ ಮೇಲೆ ಇದರ ಕರಿಛಾಯೆ ಹೆಚ್ಚೇ ವ್ಯಾಪಿಸಿದೆ. ಮಕ್ಕಳ ಪರಿಸ್ಥಿತಿಯನ್ನು ನೋಡಿದರೆ ಬೇಸರವಾಗುತ್ತಿದೆ. ಶಾಲೆಗಳು ಪ್ರಾರಂಭ ಆಗದೇ ಇರುವುದರಿಂದ ಬಾಲಕಾರ್ಮಿಕ, ಬಾಲ್ಯವಿವಾಹ ಪದ್ಧತಿಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ರೀತಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾವಿನ್ ಟೋಲ್ ಫ್ರೀ 1800 5724920 ನಂಬರ್ ಮೂಲಕ ಮಕ್ಕಳಿಗೆ ಕಲಿಯಬೇಕು ಎನ್ನುವ ಇಚ್ಛೆ ಮೂಡಿಸಲು ಹೊರಟಿರುವ ವಿದ್ಯಾವಿನ್ ಯೋಜನೆ ಶ್ಲಾಘನೀಯ ಎಂದರು.
ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮದ ಸಂಸ್ಥಾಪಕ ಹಾಗೂ ಪ್ರವರ್ತಕ ಕೆ.ವಿ. ಪ್ರಕಾಶ್ ಮಾತನಾಡಿ, ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮ ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಸರಿದೂಗಿಸುವ ಯೋಜನೆ. ಗ್ರಾಮೀಣ ಭಾಗ ಸೇರಿದಂತೆ ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ತಲುಪಿದ ಮಟ್ಟವನ್ನು ತಿಳಿಯುವ ಮೊದಲ ಪ್ರಯತ್ನ ಇದಾಗಿದೆ ಎಂದರು.
ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮದ ಸಹಸಂಸ್ಥಾಪಕಿ ವಿ.ಎಸ್. ಲತಾ ಉಪಸ್ಥಿತರಿದ್ದರು.
ವಿದ್ಯಾವಿನ್ ಆಪ್ ಆಧಾರಿತ ಶಿಕ್ಷಣ ಸಂಸ್ಥೆಯಾಗಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಮಗ್ರ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದೆ. ವಿದ್ಯುನ್ಮಾನ ಕಲಿಕಾ ಆಪ್ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಅಂತರ ನಿವಾರಿಸುವ ನಿಟ್ಟಿನಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.

ಸ್ಪರ್ಧಾ ವಿಧಾನ:
ಈ ಟೋಲ್ ಫ್ರೀ ನಂಬರ್ 1800 5724920ಗೆ ರಾಜ್ಯ ಪಠ್ಯಕ್ರಮದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮಿಸ್ ಕಾಲ್ ಕೊಟ್ಟರೆ ಸಾಕು. ಅವರ ಮೊಬೈಲ್‌ಗೆ 3 ವಿಷಯ (ಗಣಿತ, ವಿಜ್ಞಾನ, ಸಮಾಜವಿಜ್ಞಾನ)ಗಳ ತಲಾ 12 ಬಹು ಆಯ್ಕೆಯ ಪ್ರಶ್ನೆಗಳು ರವಾನೆಯಾಗುತ್ತವೆ. ಜನವರಿ 15ರೊಳಗೆ ಇವುಗಳಿಗೆ ಉತ್ತರ ಕಳುಹಿಸಬೇಕು. ಆಯ್ಕೆಯಾದ ಪ್ರತಿ ಜಿಲ್ಲೆಯ ೩ ಮಂದಿಗೆ ಟ್ಯಾಬ್, ಉಚಿತ ಆಪ್ ಶಿಕ್ಷಣ ಸಹಿತ ಸೂಕ್ತ ಬಹುಮಾನ ಸಿಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.