ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಪಂಜ.ಇದರ ಮಕ್ಕಳ ತಂಡವು ಡಿ.2 .ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇದರ ಚಿಗುರು- 2020 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಪ್ರದರ್ಶನ ನೀಡಿ ಮೆಚ್ಚಿಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕು.ರಚನಾ ಚಿದ್ಗಲ್ಲು, ವೆಂಕಟೇಶ ದೇವಸ್ಯ, ಮದ್ದಳೆ ಲಕ್ಷ್ಮೀಶ ಶಗ್ರಿತ್ತಾಯ, ಮುಮ್ಮೇಳದಲ್ಲಿ ತೇಜಸ್ ಪುತ್ಯ, ಗಗನ್ ಯು. ಡಿ, ಷಣ್ಮುಖ ಚಿದ್ಗಲ್ಲು, ಸಾತ್ವಿಕ್ ಕಂಡೂರು, ಶ್ರವಣ್ ವಿದ್ಯಾನಗರ, ಕರಣ್ ಮಾವಿನಕಟ್ಟೆ, ಹರ್ಷಿತ್ ಯಂ. ಎಚ್ ಭಾಗವಹಿಸಿದ್ದರು. ತಂಡದ ನೇತೃತ್ವವನ್ನು ಅಧ್ಯಯನ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ವಹಿಸಿದ್ದರು. ಯಕ್ಷಮಣಿ ಗಿರೀಶ್ ಗಡಿಕಲ್ಲು ರವರು ನಿರ್ದೇಶಿಸಿದರು.ಸಭಾ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಮತ್ತು ಗದಗ ಜಿಲ್ಲಾಧಿಕಾರಿಯವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.