ಬೆಂಗಳೂರಲ್ಲಿ ಉದ್ಯಮಿಯಾಗಿರುವ ಯೇನೆಕಲ್ಲಿನಲ್ಲಿ ಕೃಷಿಕರಾಗಿರುವ ಕತ್ಲಡ್ಕ ಮಾಧವ ಗೌಡರ ಧರ್ಮಪತ್ನಿ , ವಿಧಾನಸೌಧ ದಲ್ಲಿ ಕರ್ನಾಟಕ ಸರಕಾರದ ಸಂಸದೀಯ ಇಲಾಖೆಯ ವಿಶೇಷ ಕಾರ್ಯದರ್ಶಿ ಶ್ರೀಮತಿ ಬಿ.ಜಿ.ಶ್ಯಾಮಲ ರವರು ಇಂದು ಸಂಜೆ 7.15 ಕ್ಕೆ ಬೆಂಗಳೂರಿನಲ್ಲಿ ನಿಧನರಾದರು.
ಅವರು ಕಳೆದ ಮೇ. 31 ರಂದು ಸೇವೆಯಿಂದ ನಿವೃತ್ತಿಗೊಂಡಿದ್ದರು. ಅವರ ಅಂತ್ಯ ಸಂಸ್ಕಾರ ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಪೀಣ್ಯ ಸೆಕೆಂಡ್ ಸ್ಟೇಜ್ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಪತಿ ಮಾಧವ ಗೌಡರು ತಿಳಿಸಿದ್ದಾರೆ.
ಬಿ.ಜಿ.ಶ್ಯಾಮಲ ರವರು ಕಳೆದೆರಡು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು.