ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಬೆಳ್ಳಾರೆ ಮತ್ತು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇದರ ಸಂಯುಕ್ತ ಆಶ್ರಯದಲ್ಲಿ ಓದುವ ಬೆಳಕು ಕಾರ್ಯಕ್ರಮವು ಬಸ್ತಿಗುಡ್ಡೆ ಮಂಜುನಾಥ ಶಾಮಿಯಾನ ಅಂಗಡಿ ವಠಾರದಲ್ಲಿ ಡಿ. 4ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ಅಜಪಿಲ ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇದರ ಕಾರ್ಯದರ್ಶಿ ಶ್ರೀಮತಿ ಇಂದಿರಾ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು
ಬೆಳ್ಳಾರೆ ಪಂಚಾಯತ್
ಪ್ರಭಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಭವ್ಯ ಎಂ. ಬಿ ನೆರವೇರಿಸಿ ಕಾರ್ಯಕ್ರಮದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರು ಗೋಪಾಲಕೃಷ್ಣ ನಾಯಕ್ ಕಿಲಂಗೋಡಿ ಗ್ರಂಥಾಲಯ ಸದುಪಯೋಗಿಸಿ ಜ್ಞಾನವನ್ನು ವೃದ್ಧಿಸುವ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಲಲಿತ ನಾಗಪ್ಪ ಕುಲಾಲ್ ಬಸ್ತಿಗುಡ್ಡೆ, ಸ್ನೇಹಿತರ ಕಲಾಸಂಘ ಬೆಳ್ಳಾರೆಯ ನಿಕಟಪೂರ್ವಾಧ್ಯಕ್ಷ
ಕೊರಗಪ್ಪ ನಾಯ್ಕ ಕುರುಂಬುಡೇಲು ಉಪಸ್ಥಿತರಿದ್ದು ಶುಭಕೋರಿದರು. ವಿದ್ಯಾರ್ಥಿಗಳಾದ ತನ್ವಿ ಕೆ.ಎಸ್ ಮತ್ತು ತನುಷಾ ಪ್ರಾರ್ಥಿಸಿ, ಸ್ನೇಹಶ್ರೀ ಮಹಿಳಾ ಮಂಡಲದ ಪೂರ್ಣಿಮಾ ಪಡ್ಪು ಸ್ವಾಗತಿಸಿದರು. ಕುಸುಮ ಕುರುಂಬುಡೇಲು ವಂದಿಸಿ, ಶೋಭಾ ಕಾರ್ಯಕ್ರಮ ನಿರೂಪಿಸಿದರು. 6 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಗ್ರಂಥಾಲಯ ಸದಸ್ಯತನ ನೋಂದಾವಣೆ ಅಭಿಯಾನ ನಡೆಸಲಾಯಿತು. ನೋಂದಾವಣೆ ನಂತರ ವಿದ್ಯಾರ್ಥಿಗಳಿಗೆ ಓದಿಗೆ ಪೂರಕವಾದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬಹುಮಾನ ವಿತರಿಸಲಾಯಿತು.