ಮರಾಠ ಅಭಿವೃದ್ಧಿ ನಿಗಮ ಕರ್ನಾಟಕದಲ್ಲಿ ರಚನೆ ಮಾಡಿರುವುದಕ್ಕೆ ಕನ್ನಡ ಪರ ಸಂಘಟನೆಗಳು ಇಂದು ರಾಜ್ಯಬಂದ್ಗೆ ಕರೆ ನೀಡಿದ್ದು, ಸುಳ್ಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸುವ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು. ಮರಾಠ ಅಭಿವೃದ್ಧಿ ನಗಮವನ್ನು ಕರ್ನಾಟಕದಲ್ಲಿ ರಚನೆ ಮಾಡುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ವಿರೋಧವಿದೆ. ಇದರಿಂದ ಕನ್ನಡ ನಾಡು, ನುಡಿಗೆ, ಸ್ವಾಭಿಮಾನಕ್ಕೆ ಧಕ್ಕಷೆಯಾಗುವುದರಲ್ಲಿ ಸಂಶಯವಿಲ್ಲ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿರಬೇಕು. ಮರಾಠ ಅಭಿವೃದ್ಧಿ ನಿಗಮವನ್ನು ಆರಂಭಿಸುವ ವಿಚಾರವನ್ನು ಸರಕಾರ ಕೈಬಿಡಬೇಕು ಎಂದು ತಹಶೀಲ್ದಾರ್ರಿಗೆ ಸಲ್ಲಿಸಲಾಗಿರುವ ಮನವಿಯಲ್ಲಿ ವಿನಂತಿಸಲಾಗಿದೆ. ಉಪತಹಶೀಲ್ದಾರ್ ಚಂದ್ರಕಾಂತ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ್ ಕುಮಾರ್ ಮುಳ್ಯ, ಪ್ರ.ಕಾರ್ಯದರ್ಶಿ ಶಾಫಿ ಕುತ್ತಮೊಟ್ಟೆ, ವಸಂತ್ಕುಮಾರ್ ಬೀರಮಂಗಲ, ಯೋಗೀಶ್ ಕಲ್ಲುಗುಡ್ಡೆ, ಖಾದರ್ ಅರಂತೋಡು ಇದ್ದರು.