ಜಾಲ್ಸೂರಿನ ಗ್ರಾಮ ಪಂಚಾಯತಿ ಬಳಿ ಮುಖ್ಯರಸ್ತೆಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ಪ್ರಾರಂಭಗೊಂಡಿದೆ.
ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಜಾಲ್ಸೂರಿನಲ್ಲಿ ಇದುವರೆಗೆ ಬ್ಯಾರಿಕೇಡ್ ಗಳನ್ನು ಅಳವಡಿಸಿಕೊಂಡು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು.
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಜಾಲ್ಸೂರು ಗ್ರಾಮಕ್ಕೆ ಸುಳ್ಯ ತಾಲೂಕಿನ ನಾಲ್ಕು ಗ್ರಾಮಗಳು ಆವರಿಸಿದ್ದು, ಹೆಚ್ಚು ಜನರು ಪ್ರತಿನಿತ್ಯ ಓಡಾಡುವ ಪ್ರದೇಶವಾಗಿದ್ದು, ಆರಕ್ಷಕ ಹೊರಠಾಣೆ ಅಗತ್ಯವಾಗಿ ತೆರೆಯಬೇಕು ಎಂದು ಜಾಲ್ಸೂರಿನ ಕೇಸರಿಬಳಗ ಖಂಡ ಸಂಚಾಲಕ ರವಿರಾಜ್ ಗಬ್ಬಲಡ್ಕ ಅವರು ಈ ಹಿಂದೆ ಕರ್ನಾಟಕ ಸರಕಾರದ ಗೃಹಸಚಿವರು ಸೇರಿದಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಇದೀಗ ಸುಳ್ಯ ಪೊಲೀಸ್ ಠಾಣೆಯ ಅಧೀನದಲ್ಲಿ ಜಾಲ್ಸೂರಿನಲ್ಲಿ ಪೊಲೀಸ್ ಚೆಕ್ ಪೋಸ್ಟ್ ತೆರೆದಿದ್ದು, ಮುಖ್ಯರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಸುಳ್ಯ ಆರಕ್ಷಕ ಠಾಣೆಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.