ಬೆಳ್ಳಾರೆ ಗ್ರಾಮದ ತಡಗಜೆಯಲ್ಲಿ ರಸ್ತೆ , ಕುಡಿಯುವ ನೀರು ,ಚರಂಡಿ ವ್ಯವಸ್ಥೆ ಇನ್ನಿತರ ಹಲವಾರು ಸಮಸ್ಯೆ ಗಳಿದ್ದು ಕಳೆದ 25 ವರುಷಗಳಿಂದ ಅನುಭವಿಸುತ್ತಾ ಬಂದಿರುವ ತಡಗಜೆ ನಿವಾಸಿಗಳು ಸೇರಿ ಈ ಬಾರಿಯ ಗ್ರಾ.ಪಂ ಚುನಾವಣೆ ಯನ್ನು ಬಹಿಷ್ಕರಿಸುವ ಬಗ್ಗೆ ಚರ್ಚಿಸಲು ಡಿ. 6 ರಂದು ಸಮಾಲೋಚನಾ ಸಭೆ ಕರೆದಿದ್ದಾರೆ. . ತಡಗಜೆ ಅಮ್ಮನವರ ಕಟ್ಟೆ ಬಳಿ ಬೆಳಗ್ಗೆ 10.30 ಕ್ಕೆ ಸರಿಯಾಗಿ ನಡೆಯಲಿರುವ ಈ ಸಭೆಯಲ್ಲಿ ಊರ ಪ್ರಮುಖರೆಲ್ಲ ಭಾಗವಹಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.