ತುಳಸಿ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಮತ್ತು ಪಂಜ, ಪಾಂಡಿಗದ್ದೆ, ಕರಿಕ್ಕಳ, ಅಡ್ಡತೋಡು, ನಾಗಾತೀರ್ಥ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜಂಟಿ ಆಶ್ರಯದಲ್ಲಿ ಡಿ. 5 ರಂದು ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಸರಸ್ವತಿ.ಪಿ. ಇವರಿಗೆ ಅಭಿನಂದನಾ ಕಾರ್ಯಕ್ರಮ ಪಂಜ ವನಿತಾ ಸಮಾಜದಲ್ಲಿ ಜರಗಿತು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಗೊಂಚಲು ಸಮಿತಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಕಮಲ ವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ದೈಹಿಕ ಶಿಕ್ಷಕಿ ಶ್ರೀಮತಿ ಗಿರಿಜಾ ಶ್ರೀಮತಿ ಸರಸ್ವತಿ ತವರಿಗೆ ಅರಶಿನ ಕುಂಕುಮ ಇಟ್ಟು ಫಲ ಪುಷ್ಪಗಳಿಂದ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದರು. ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥರವರು ಸರಸ್ವತಿಯವರ ಕಾರ್ಯವೈಖರಿಯ ಬಗ್ಗೆ ಮಾತನಾಡಿ ಶುಭಹಾರೈಸಿದರು. ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಹೇಮಲತಾ ಜನಾರ್ದನ್ ರವರು ಮಾತನಾಡಿ ಸಂಸ್ಥೆಗೆ ಸಹಕರಿಸಿದ ಮತ್ತು ನೀಡಿದ ಸಲಹೆ ಸೂಚನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಂಬೆತ್ತಾಡಿ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ಶ್ರೀಮತಿ ಸುಶೀಲಾ ಮಾತನಾಡಿ ಇಲಾಖೆಯಲ್ಲಿ ನಾವು ತಾಯಿ ಮಗುವಿನ ಭಾಂದವ್ಯ ಪ್ರೀತಿ ಇರುವ ರೀತಿಯಲಿ ನಮ್ಮೊಂದಿಗೆ ಸಹಕರಿಸಿದ್ದಾರೆ ಎಂದು ಪ್ರಶಂಸಿಸಿ ಶುಭಹಾರೈಸಿದರು. ನಂತರ ಸನ್ಮಾನಿತರಾದ ಸರಸ್ವತಿ . ಪಿ. ಇವರು ಮಾತನಾಡಿ ಇಲಾಖೆಯ ಯೋಜನೆಯ ಮಾಹಿತಿ, ಸ್ತ್ರೀ ಶಕ್ತಿ ಸಂಘಟನೆಗಳ ಬಗ್ಗೆ ಮತ್ತು ಪ್ರಾಣಾಯಾಮದ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಸಹಾಯಕಿ ಶ್ರೀಮತಿ ಪದ್ಮಾವತಿ ಪ್ರಾರ್ಥಿಸಿದರು. ಶ್ರೀಮತಿ ಭಾಗೀರಥಿ ಸನ್ಮಾನಿತರ ಪರಿಚಯ ಮಾಡಿಸಿದರು.
ಶ್ರೀಮತಿ ಮಮತಾ, ಗಿರಿಜಾ ಟೀಚರ್ ರನ್ನು ಪರಿಚಯಿಸಿದರು. ಶ್ರೀಮತಿ ಕಮಲಾ ಸ್ವಾಗತಿಸಿದರು. ಲೀಲಾವತಿ ಕರಿಕ್ಕಳ ವಂದಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ವನಿತಾ ಸಮಾಜದ ಮಾಜಿ ಅಧ್ಯಕ್ಷೆ ಚಂದ್ರವತಿ ಹೊನ್ನಪ್ಪ ಚಿದ್ಗಳ್ಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಾ. ಡಿ. ಪ್ರಸಾದ್ ಕಾನತ್ತೂರು ಕಾರ್ಯಕ್ರಮ ನಿರೂಪಿಸಿದರು.