ಹರಿಹರ: ಎರಡನೇ ದಿನವೂ ತೆರೆದಿದ್ದ ಬಾರ್& ರೆಸ್ಟೋರೆಂಟ್

0

ಮದ್ಯದಂಗಡಿ ವಿರುದ್ದ ಧರಣಿ,ಪೊಲೀಸರ ಸರ್ಪಗಾವಲು, ಕಟ್ಟೆಚ್ಚರ

ಹರಿಹರ ಪಲ್ಲತಡ್ಕದಲ್ಲಿ ಬಾರ್& ರೆಸ್ಟೋರೆಂಟ್ ತೆರೆದಿದ್ದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಮದ್ಯದಂಗಡಿ ವಿರುದ್ದ ಮದ್ಯ ಮಾರಟ ಮುಕ್ತ ಹೋರಾಟ ಗ್ರಾಮ ಸಮಿತಿ ನೇತೃತ್ವದಲ್ಲಿ ಧರಣಿಯೂ ಮುಂದುವರೆದಿದೆ.

ಹರಿಹರ ಜಂಕ್ಷನ್ ನಲ್ಲಿ ಸಾರ್ವಜನಿಕರು ಸೇರಿ ಘೋಷಣೆ ಕೂಗುತ್ತಾ ಬಾರ್ ಬಳಿ ತೆರಳಲು ಅನುವಾದರು. ಅದಕ್ಕೆ ಪೊಲೀಸರು ಅನುವು ಮಾಡಿ ಕೊಡಲಿಲ್ಲ. ಬಳಿಕ ಹೋರಾಟಗಾರರು ಬಾರ್ ಹೋಗುವ ರಸ್ತೆಯ ಬಳಿ ಮುಖ್ಯ ರಸ್ತೆಯ ಹತ್ತಿರ ಧರಣಿ ಮುಂದುವರೆಸಿದರು.

ನೂರಾರು ಸಂಖ್ಯೆಯ ಪುರುಷರು, ಮಹಿಳೆಯರು ಪ್ರತಿಭಟನೆ ನಡೆಸುತಿದ್ದು ಮುಂಜಾಗ್ರತಾ ಕ್ರಮವಾಗಿ ಹಲವು ಸಂಖ್ಯೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಡಿ.ವೈ.ಎಸ್.ಪಿ, ಸುಳ್ಯದ ಸರ್ಕಲ್, ಸುಳ್ಯದ ಎಸ್ ಐ, ಸುಬ್ರಹ್ಮಣ್ಯ ಎಸ್ ಐ, ಒಂದು ಪೊಲೀಸ್‌ ತುಕಡಿ ಸೇರಿ 50ಕ್ಕೂ ಮಿಕ್ಕಿ ಪೋಲಿಸರು ಉಪಸ್ಥಿತರಿದ್ದಾರೆ.