ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ದತೆ : ರಾಷ್ಟ್ರಕ್ಕೆ ಮಾದರಿ ಕಾರ್ಯಕ್ರಮಕ್ಕೆ ಗಣ್ಯರ ಸಲಹೆ
೬ ಬಾರಿ ಗೆದ್ದಿರುವ ಸುಳ್ಯ ಶಾಸಕ ಎಸ್.ಅಂಗಾರರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಅವರನ್ನು ಸಾರ್ವಜನಿಕ ವಾಗಿ ಅಭಿನಂದಿಸುವ ಕುರಿತು ಪೂರ್ವಭಾವಿ ಸಭೆ ಸುಳ್ಯದ ತಾ.ಪಂ. ಸಭಾಂಗಣದಲ್ಲಿ ಇಂದು ನಡೆಯಿತು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯರಾದ ಎ.ವಿ. ತೀರ್ಥರಾಮರು ಪ್ರಾಸ್ತಾವಿಕ ಮಾತನಾಡಿದರು. ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವೇದಿಕೆಯಲ್ಲಿ ದ್ದರು.
ಜ.೨೫ ರಂದು ಸಂಜೆ ೪ ಗಂಟೆಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡುವ ಬಗ್ಗೆ ನಿರ್ಧರಿಸಲಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರನ್ನು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಜಿಲ್ಲೆಯ ಎಲ್ಲ ಶಾಸಕರುಗಳನ್ನು, ವಿಧಾನ ಪರಿಷತ್ ಸದಸ್ಯರು ಹೀಗೆ ಹಲವರನ್ನು ಆಹ್ವಾನಿಸುವ ಸಲಹೆ ಸಭೆಯಲ್ಲಿ ಬಂತು.
ಒಟ್ಟಾರೆಯಾಗಿ ಕಾರ್ಯಕ್ರಮ ರಾಷ್ಟ್ರಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಏರ್ಪಡಿಸಲು ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಮುಖರಾದ ಎಂ.ಬಿ.ಸದಾಶಿವ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ವೆಂಕಟ್ ದಂಬೆಕೋಡಿ, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ್ ದಾಮ್ಲೆ, ಜಿ.ಪಂ. ಅಧ್ಯಕ್ಷ ಹರೀಶ್ ಕಂಜಿಪಿಲಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ಕೆ.ಎಂ. ಮುಸ್ತಫ, ವೆಂಕಟ್ ವಳಲಂಬೆ, ಸುಧಾಕರ ಕಾಮತ್ ವಿಬೋಬಾನಗರ, ನಾರಾಯಣ ಕೇಕಡ್ಕ, ಡಾ.ಲೀಲಾದರ್ ಡಿ.ವಿ., ರಜತ್ ಅಡ್ಕಾರ್, ದೊಡ್ಡಣ್ಣ ಬರೆಮೇಲು, ಎ.ಪಿ.ಎಂ.ಸಿ. ಅಧ್ಯಕ್ಷ ವಿನಯ ಮುಳುಗಾಡು, ಜಯರಾಜ್ ಕುಕ್ಕೆಟ್ಟಿ, ಶಿವಾನಂದ ಕುಕ್ಕುಂಬಳ, ಡಾ.ಎನ್.ಎ. ಜ್ಞಾನೇಶ್, ಕರುಣಾಕರ ಹಾಸ್ಪಾರೆ, ಐ.ಬಿ.ಚಂದ್ರಶೇಖರ, ಗಂಗಾಧರ್ ಕೇಪಳಕಜೆ, ರಾಧಾಕೃಷ್ಣ ಬೊಳ್ಳೂರು, ಜಿ.ಜಿ.ನಾಯಕ್, ಹರೀಶ್ ರೈ ಉಬರಡ್ಕ, ಶ್ರೀನಾಥ್ ಬಾಳಿಲ, ಮಹೇಶ್ ರೈ ಮೇನಾಲ, ರಮಾನಂದ ರೈ, ಸುಧಾಕರ ಕುರುಂಜಿಭಾಗ್, ಮೋಹಿನಿ ನಾಗರಾಜ್, ಜಯಂತಿ ಜನಾರ್ದನ, ಇಂದಿರಾ ರಾಜಶೇಖರ, ಸುಭೋದ್ ಶೆಟ್ಟಿ ಮೇನಾಲ ಮೊದಲಾದವರಿದ್ದರು.
ಕಾರ್ಯಕ್ರಮದ ಯಶಸ್ಸಿಗಾಗಿ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಡಾ. ಕೆ.ವಿ.ಚಿದಾನಂದ, ಅಧ್ಯಕ್ಷರಾಗಿ ಡಾ.ಗಿರೀಶ್ ಭಾರದ್ವಾಜ್ ಇರುವಂತೆ ಎಲ್ಲ ಸಂಘ ಸಂಸ್ಥೆಗಳವರನ್ನು ಸೇರಿಕೊಂಡು ಸಮಿತಿಯನ್ನು ರಚಿಸಲಾಗಿದೆ.