ಸಚಿವ ಅಂಗಾರರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆಯನ್ನು ಅಧಿಕೃತವಾಗಿ ನೀಡಲಾಗಿದೆ.
ನೂತನ ಸಚಿವರುಗಳ ಖಾತೆಯ ಬಗ್ಗೆ ಇಂದು ಮುಂಜಾನೆಯಿಂದಲೇ ವರದಿಗಳು ಬರುತ್ತಿದ್ದವು. ಆದರೆ ರಾಜ್ಯಪಾಲರಿಂದ ಅಂತಿಮ ಅಂಕಿತ ದೊರಕಿದ ಅಧಿಕೃತ ಪಟ್ಟಿ ಪ್ರಕಟವಾಗಿರಲಿಲ್ಲ. ಇದೀಗ ರಾಜ್ಯಪಾಲರ ಅಂಕಿತ ದೊರೆತ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕ ರಾಜ್ಯ ಪತ್ರ(ಗಜೆಟ್)ದಲ್ಲಿ ಘೋಷಿಸಲಾಗಿದೆ.
ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮುಜರಾಯಿ ಖಾತೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ನೀಡಲಾಗಿದೆ.