ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಮುಂಬಾಗ ಗ್ಲೋಬಲ್ ಸೆಂಟರ್ ಕಟ್ಟಡದಲ್ಲಿ ದಿಲ್ಶಾದ್ ಮಾಲಕತ್ವದ ಹವಾನಿಯಂತ್ರಿತ ಪ್ರೋ ಕಟ್ ಮೆನ್ಸ್ ಪಾರ್ಲರ್ ಇಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ , ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಆಡಳಿತ ಕಮಿಟಿಯ ಅಧ್ಯಕ್ಷ ಹಾಜಿ ಆದಂ ಕುಂಞಿ ಕಮ್ಮಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನ.ಪಂ ಸದಸ್ಯ ಶರೀಫ್ ಕಂಠಿ, ಕೆಪೆಕ್ ಮಾಜಿ ನಿರ್ದೇಶಕ ಹಾಜಿ ಪಿಎ ಮಹಮ್ಮದ್, ಮೊಬೈಲ್ ಹಾರ್ಟ್ ಸಂಸ್ಥೆಯ ಮಾಲಕ ಶಮೀರ್, ಗ್ಲೋಬಲ್ ಟೈಲ್ಸ್ ಸಂಸ್ಥೆಯ ಮಾಲಕ ಶಮೀರ್, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಹ್ಶಾನ್, ಸುಹೇಬ್, ನಹೀಂ, ಜಾಹಿದ್, ಉಬೈದ್, ಶಾರೀಕ್, ಮೊದಲಾದವರು ಸಹಕರಿಸಿದರು. ನ.ಪಂ ಮಾಜಿ ಸದಸ್ಯ ಹಾಜಿ ಮುಸ್ತಫಾ ಜನತಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.