ದ.ಕ. ಜಿಲ್ಲಾ ಪಂಚಾಯತ್ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಮತ್ತು ಗ್ರಾ.ಪಂ. ಕಳಂಜ ಹಾಗೂ ಬಾಳಿಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಕು ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬರವು ಕಳಂಜ ಬಾಳಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಜ. 23ರಂದು ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ 10.30ರ ತನಕ ತಂಟೆಪ್ಪಾಡಿ ಶಾಲಾ ವಠಾರ, 10.30ರಿಂದ 11 ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರ, 11 ರಿಂದ 11.30 ಅಕ್ಷರ ಕರಾವಳಿ ಕಟ್ಟಡ ವಿಷ್ಣು ನಗರ ಕಳಂಜ, 11.30ರಿಂದ 12 ಬಾಳಿಲ ಗ್ರಂಥಾಲಯ ಬಳಿ, 12ರಿಂದ 12.30 ಬಾಳಿಲ ಮುಪ್ಪೇರ್ಯ ಹಾಲು ಉತ್ಪಾದಕರ ಸ.ಸಂಘದ ಬಳಿ ನಡೆಯಲಿದೆ ಎಂದು ಬೆಳ್ಳಾರೆ ಪಶು ವೈದ್ಯಕೀಯ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.