ರಾಜಕೀಯ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಹಕಾರಿ ಕ್ರೀಡಾ ಹಾಗೂ ಕೃಷಿ ಕ್ಷೇತ್ರದಲ್ಲಿ 3 ದಶಕದಿಂದ ಕ್ರಿಯಾಶೀಲರಾಗಿದ್ದ ಅರಂತೋಡು ಟಿ.ಎಮ್.ಶಹೀದ್ ರವರ 50ನೇ ಸುವರ್ಣ ಸಂಭ್ರಮ ಕ್ಕೆ ಜ.21 ರಂದು ತೆಕ್ಕಿಲ್ ನಿವಾಸದಲ್ಲಿ ಧಾರ್ಮಿಕ ಕಾರ್ಯಕ್ರಮ ದೊಂದಿಗೆ ಚಾಲನೆ ನೀಡಲಾಯಿತು.
ಧಾರ್ಮಿಕ ಕಾರ್ಯಕ್ರಮ ವನ್ನು ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ಹಾಜ್ ಇಸ್ಹಾಖ್ ಬಾಖವಿ ನೇರವೆರಿಸಿದರು. ಪೇರಡ್ಕ ಮಸೀದಿ ಖತೀಬರಾದ ಸುಹೇಲ್ ದಾರಿಮಿ ,ನವಾಝ್ ದಾರಿಮಿ ,ಝಕರಿಯಾ ಮುಸ್ಲಿಯಾರ್ ಆರ್ಕಾನ,ನವಾಜ್ ದಾರಿಮಿ, ಭಾಗವಹಿಸಿದರು. ಸುವರ್ಣ ಸಂಭ್ರಮದ ಅಧ್ಯಕ್ಷ ರಾದ ಸದಾನಂದ ಮಾವಜಿ,
ಕರುಣ್ ಅಡ್ಪಂಗಾಯ,ಪ್ರಧಾನ ಕಾರ್ಯದರ್ಶಿ ಕೆ.ಟಿ.ವಿಶ್ವನಾಥ ,ಪರಶುರಾಮ ಚಿಲ್ತಡ್ಕ,ಸಂತೋಷ್ ಕುತ್ತಮೊಟ್ಟೆ,ದಯಾನಂದ ಕುರುಂಜಿ, ಟಿ.ಎಮ್.ಬಾಬಾ ಹಾಜಿ,ಅಶ್ರಫ್ ಗುಂಡಿ,ತಾಜ್ ಮಹಮದ್ ಸಂಪಾಜೆ,ಅಬ್ಬಾಸ್ ಸಂಟ್ಯಾರ್,ಹಾಜಿ ಅಬ್ದುಲ್ ಖಾದರ್ ಪಠೇಲ್,ಹಾಜಿ ಮಹಮ್ಮದ್ ,ಹಾಜಿ ರಝಾಕ್ ಮೊಟ್ಟಂಗಾರ್,ಹಾಜಿ ಕೆ.ಎಮ್.ಮಹಮ್ಮದ್ ,ಟಿ.ಎಮ್.ಜಾವೇದ್ ತೆಕ್ಕಿಲ್,ಅಬೂಬಕ್ಕರ್ ಪಾರೆಕ್ಕಲ್, ಮಜೀದ್ ಸಿಟಿ ಮೆಡಿಕಲ್ಸ್ ,ಹನೀಫ್,ಮೂಸಾನ್ ಇದ್ದರು.ಮನೆಯ ಕಾರ್ಯಕ್ರಮ ಮುಗಿಸಿ ತೆಕ್ಕಿಲ್ ಶಾಲೆಗೆ ಭೇಟಿ ನೀಡಿದ ಶಹೀದ್ ರವರಿಗೆ ಶಾಲಾ ಪರವಾಗಿ ಸ್ವಾಗತಿಸಿ ಸಭಾ ಕಾರ್ಯಕ್ರಮವನ್ನು ಏರ್ಪಡಿಸಿದರು.
ಸುವರ್ಣ ಸಂಭ್ರಮದ ಅಧ್ಯಕ್ಷ ರಾದ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ ನಡೆದು ಶಾಲಾ ಶಿಕ್ಷಕಿಯರು ಹಾಗೂ ಮಕ್ಕಳು ಶಹೀದ್ ರವರಿಗೆ ಶುಭಾಶಯ ಕೋರಿದರು. ಸಮಾರಂಭದಲ್ಲಿ ಪರಶುರಾಮ ಚಿಲ್ತಡ್ಕ,ದಿನಕರ ಸಣ್ಣ ಮನೆ,ಮುಸ್ತಫಾ ಸುಳ್ಯ ,ಸಿದ್ದೀಕ್ ಕೊಕ್ಕೊ,ರಿಯಾಝ್ ಸುಳ್ಯ , ತಾಜ್ ಮಹಮದ್ ,ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಜಿ.ಕೆ. ಹಮೀದ್. ಕೆ.ಆರ್.ಜಗದೀಶ್ ರೈ,ಲಿಸ್ಸಿ ಮೊನಾಲಿಸಾ,ಎಸ್.ಕೆ.ಹನೀಫ್,ಹಂಸ ಕಲ್ಲುಗುಂಡಿ, ಶಾಲಾ ಮುಖ್ಯೋಪಾಧ್ಯಾಯ ಶೀಮತಿ ವಾಣಿ,ಮುಂತಾದವರು ಉಪಸ್ಥಿತರಿದ್ದರು .
ಅಶ್ರಫ್ ಗುಂಡಿ ಸ್ವಾಗತಿಸಿ, ವಂದಿಸಿದರು. ನಂತರ ಕಲ್ಲುಗುಂಡಿ ಸಂತ ಪ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಭೇಟಿ ನೀಡಿದರು.ಫಾದರ್ ಪ್ಲಾವ್ ಕ್ರಾಸ್ತಾ ರವರು ಟಿ.ಎಮ್.ಶಹೀದ್ ರವರಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು,ಅಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾದರ್ ಪ್ಲಾವ್ ಕ್ರಾಸ್ತಾ ಮಾತನಾಡಿ ಜೀವನದಲ್ಲಿ ಉದ್ದೇಶ ವಿಲ್ಲದೇ ಬದುಕುವರನ್ನು ಒಟ್ಟಿನಲ್ಲಿ ಎತಕಾಗಿ ಬದುಕಬೇಕು ಎಂಬುದಕ್ಕೆ ಉತ್ತರ ವಲ್ಲ.ನಮ್ಮ ಸಮಾಜದಲ್ಲಿ ಬದುಕಬೇಕು ಸಮಾಜಕ್ಕೆ ನಮ್ಮಿಂದ ಕೊಡುಗೆ ನೀಡ ಬೇಕು ಎಂಬುದಕ್ಕೆ ಟಿ.ಎಮ್.ಶಹೀದ್ ರವರೇ ಉದಾಹರಣೆ. ಜಾತಿ ಧರ್ಮ ವನ್ನು ಬಿಟ್ಟು ಸೌಹಾರ್ದತೆ ಮೈಗೂಡಿಸಿ ಎಲ್ಲರೊಂದಿಗೆ ಬೆರೆತು ಜೀವನ ನಡೆಸುತ್ತಿರುವುದು ತುಂಬಾ ಸಂತೋಷ ವಾಗಿದೆ ಎಂದರು.
ಟಿ.ಎಮ್.ಶಹೀದ್ ತೆಕ್ಕಿಲ್, ಸುವರ್ಣ ಸಂಭ್ರಮದ ಅಧ್ಯಕ್ಷ ಸದಾನಂದ ಮಾವಜಿ,ಲಿಸ್ಸಿ ಮೊನಾಲಿಸಾ,ತಾಜ್ ಮಹಮ್ಮದ್,ಹಂಸ ಕಲ್ಲುಗುಂಡಿ,ದಿನಕರ ಸಣ್ಣಮನೆ,ಅಶ್ರಫ್ ಗುಂಡಿ,ಮುಂತಾದವರು ಉಪಸ್ಥಿತರಿದ್ದರು .
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ಮತ್ಸ್ಯ ತೀರ್ಥ ಕ್ಕೆ ಆಗಮಿಸಿ ಮೀನುಗಳಿಗೆ ಆಹಾರ ನೀಡಿದರು.
ಈ ಸಂದರ್ಭದಲ್ಲಿ ಎನ್.ಎ.ಜ್ಞಾನೇಶ್,ಡಾ.ಸಾಯಿಗೀತಾ, ಸದಾನಂದ ಮಾವಜಿ,ಶೇಷಗಿರಿ, ,ಧನುರಾಜ್,ಮುಸ್ತಫಾ ಸುಳ್ಯ ,ರಿಯಾಜ್ ಸುಳ್ಯ ,ಸಿದ್ದೀಕ್ ಕೊಕ್ಕೊ,ಹಂಸ ಕಲ್ಲುಗುಂಡಿ,ರಿಯಾಜ್ ಕಲ್ಲುಗುಂಡಿ ಮುಂತಾದವರು ಉಪಸ್ಥಿತರಿದ್ದರು .ನಂತರ ಪೇರಡ್ಕ ವಲಿಯುಲ್ಲಾಹಿ ದರ್ಗಾ ಭೇಟಿ ನೀಡಿ ಪ್ರಾರ್ಥನೆ ಗೈದು ತನ್ನ ಅಜ್ಜ ದಿವಂಗತ ತೆಕ್ಕಿಲ್ ಮಹಮ್ಮದ್ ಹಾಜಿ ಮತ್ತು ಕುಟುಂಬದಲ್ಲಿ ಮರಣ ಹೊಂದಿದರವರ ದಫನ ಭೂಮಿಗೆ ತೆರಳಿ ಪ್ರಾರ್ಥಿಸಿದರು.
ಸ್ಥಳಿಯ ಖತೀಬರಾದ ಸುಹೇಲ್ ಬಾಖವಿ,ಝಕರಿಯಾ ದಾರಿಮಿ ಅರ್ಕಾನ,ಟಿ.ಎಮ್.ಶಹೀದ್ ,ಸುವರ್ಣ ಸಂಭ್ರಮದ ಅಧ್ಯಕ್ಷ ಸದಾನಂದ ಮಾವಜಿ,ದಿನಕರ ಸಣ್ಣ ಮನೆ,ಅಶ್ರಫ್ ಗುಂಡಿ, ರಝಾಖ್ ಹಾಜಿ ಮೊಟ್ಟಂಗಾರ್,ಉಪಸ್ಥಿತರಿದ್ದರು. ಸುಳ್ಯ ಸರ್ಕಾರಿ ಆಸ್ಪತ್ರೆ ಗೆ ತೆರಳಿ ಸುವರ್ಣ ಸಂಭ್ರಮದ ಪ್ರಯುಕ್ತ ಟಿ.ಎಮ್.ಶಹೀದ್ ರವರು ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಸುಳ್ಯ ಗೌಡರ ಯುವ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಹಾರ ಹಾಕಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಕರುಣಾಕರ, ಕರ್ನಾಟಕ ಸರ್ಕಾರದ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್ ,ಸದಾನಂದ ಮಾವಜಿ,ಮುಸ್ತಫಾ ಸುಳ್ಯ ,ದಿನೇಶ್ ಮಡ್ತಿಲ,ಪಿ.ಎ.ಮಹಮದ್ ಸುಳ್ಯ ,ಶರೀಫ್ ಕಂಠಿ,ಅಶ್ರಫ್ ಗುಂಡಿ,ಟಿ.ಎಮ್.ಜಾವೇದ್ ತೆಕ್ಕಿಲ್, ಸಿದ್ದೀಕ್ ಕೊಕ್ಕೊ,ಸುಳ್ಯ ಆರೋಗ್ಯ ಮಿತ್ರ ಮುರುಳಿ, ರಿಯಾಜ್ ಕಟ್ಟೆಕಾರ್ ,ಅಬ್ದುಲ್ ಮಜೀದ್,ಹನೀಫ್,ಮುಂತಾದವರು ಉಪಸ್ಥಿತರಿದ್ದರು .