ಜೇಸಿಐ ಪಂಜ ಪಂಚಶ್ರೀ ಇದರ
ಗಣೇಶ್ ಪ್ರಸಾದ್ ಭೀಮಗುಳಿಯವರು ಅಧ್ಯಕ್ಷತೆಯ 2021ಘಟಕಾಡಳಿತ ಮಂಡಳಿ ಗೆ ಪದಗ್ರಹಣ ಸಮಾರಂಭ ಜ.21ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರುಗಿತು. ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ನಾಗ್ ಮಣಿ ಕೆದಿಲ ವಹಿಸಿದ್ದರು. ಪದಗ್ರಹಣ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿಯವರು ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಧವ ಗೌಡ ಜಾಕೆ ಶುಭ ಹಾರೈಸಿದರು.ಪದಗ್ರಹಣ ಅಧಿಕಾರಿಯಾಗಿ ವಲಯ 15 ರ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಪಾಲ್ಗೊಂಡಿದ್ದರು.ಅತಿಥಿಯಾಗಿ ವಲಯ ಉಪಾಧ್ಯಕ್ಷ ಗಿರೀಶ್ ಎಸ್ ಪಿ ಹಾಗೂ ಘಟಕದ ನಿಕಟಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ, ಕಾರ್ಯದರ್ಶಿ ದೇವಿಪ್ರಸಾದ್ ಚಿಕ್ಮುಳಿ, ಸ್ಥಾಪಕಾಧ್ಯಕ್ಷ
ದೇವಿಪ್ರಸಾದ್ ಜಾಕೆ, ನೂತನ ಕಾರ್ಯದರ್ಶಿ ಲೋಕೇಶ್ ಆಕ್ರಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ರಾಜೇಶ್ ಕಂಬಳ ವೇದಿಕೆಗೆ ಆಹ್ವಾನಿಸಿದರು.ನಾಗ್ ಮಣಿ ಕೆದಿಲ ಸ್ವಾಗತಿಸಿದರು ಪ್ರಕಾಶ್ ಅಳ್ಪೆ ಜೇಸಿವಾಣಿ ನುಡಿದರು.ಲೋಕೇಶ್ ಆಕ್ರಿಕಟ್ಟೆ ವಂದಿಸಿದರು.