ಸಾರ್ವಜನಿಕರು ಎಚ್ಚರ ವಹಿಸುವಂತೆ ಉಪವಲಯಾರಣ್ಯಾಧಿಕಾರಿಗಳಿಂದ ಸೂಚನೆ
ಪೆರುವಾಜೆ ಗ್ರಾಮದ ಅರ್ನಾಡಿ ಹತ್ತಿರ ಚಿರತೆಯೊಂದು ಓಡಾಟ ನಡೆಸಿದ ವಿಚಾರ ತಿಳಿದು ಬಂದಿದೆ.
ಮುಕ್ಕೂರು ಕಡೆಗೆ ಬೈಕಿನಲ್ಲಿ ಹೋಗುವ ಬೈಕ್ ಸವಾರರೊಬ್ಬರಿಗೆ ಅರ್ನಾಡಿ ಸಮೀಪ ಚಿರತೆ ಕಂಡುಬಂದಿದ್ದು ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೆನ್ನಲಾಗಿದೆ.
ರಾತ್ರಿ ಪ್ರಯಾಣಿಸುವ ಗ್ರಾಮಸ್ಥರು ಜಾಗರೂಕರಾಗಿ ಪ್ರಯಾಣ ನಡೆಸಬೇಕು. ತೋಟಗಳಿಗಲ್ಲಿ ರಾತ್ರಿ ಕೃಷಿಗಳಿಗೆ ನೀರು ಬಿಡುವ ಕೃಷಿಕರು ಎಚ್ಚರ ವಹಿಸುವಂತೆ ತಿಳಿಸಿದ್ದಾರೆ. ಹಾಗೂ ಎಲ್ಲಿಯಾದರೂ ಯಾವುದೇ ಸಮಯದಲ್ಲಿ ಚಿರತೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಬೆಳ್ಳಾರೆ ಶಾಖೆಯ ಉಪವಲಯಾರಣ್ಯಾಧಿಕಾರಿ ಪ್ರಸಾದ್.ಕೆ.ಜೆ ವಿನಂತಿಸಿದ್ದಾರೆ.