ದೇವಚಳ್ಳ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಮಲೆ ಉಳ್ಳಾಕ್ಲು ಪರಿವಾರ ದೈವಗಳ ದೈವಸ್ಥಾನದಲ್ಲಿ ಜನವರಿ ೨೦ ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿಗೆ ಸ್ವಾಮಿ ಯಕ್ಷಗಾನ ಕಲಾಸಂಘ ವಳಲಂಬೆ ಇದರ ವಿದ್ಯಾರ್ಥಿಗಳು ನಡೆಸಿದ ಜ್ಯೋತಿಸ್ವರೂಪ ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷಗಾನದ ಗುರುಗಳಾದ ಗಿರೀಶ್ ಗಡಿಕಲ್ಲು ರವರನ್ನು ಬಾಬುಗೌಡ ಅಚ್ರಪ್ಪಾಡಿಯವರು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವೆಂಕಟ್ರಮಣ ಕುಚ್ಚಾಲ, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ, ಕೇಶವ ಹೊಸೋಳಿಕೆ, ಶಿಕ್ಷಕರಾದ ಮಾಧವ ಮೂಕಮಲೆ ಮತ್ತಿತರರು ಉಪಸ್ಥಿತರಿದ್ದರು. ಶಶಿಧರ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
( ವರದಿ ದಿನೇಶ್ ಹಾಲೆಮಜಲು)