ಜಾಲ್ಸೂರು ಗ್ರಾಮದ ದರ್ಖಾಸ್ತು ನಿವಾಸಿ, ನಿವೃತ್ತ ಅಂಚೆಪಾಲಕ ಶ್ರೀಕೃಷ್ಣ ಭಟ್ ಅವರು ಹೃದಯಾಘಾತದಿಂದ ಜ.20ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಜಾಲ್ಸೂರು ಅಂಚೆ ಕಛೇರಿಯಲ್ಲಿ ಸುಧೀರ್ಘ 36 ವರ್ಷಗಳ ಅವಧಿಯಲ್ಲಿ ಅಂಚೆಪಾಲಕರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀಕೃಷ್ಣ ಭಟ್ ಅವರು 2011ರಲ್ಲಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಗಿರಿಜ, ಪುತ್ರರಾದ ಬಾಲಸುಬ್ರಹ್ಮಣ್ಯ, ಚಂದ್ರಶೇಖರ ಪುರುಷೋತ್ತಮ, ಪುತ್ರಿಯರಾದ ಶ್ರೀಮತಿ ಗಂಗಾಭವಾನಿ, ಶ್ರೀಮತಿ ಸುಮತಿ, ಶ್ರೀಮತಿ ರಾಜೇಶ್ವರಿ, ಶ್ರೀಮತಿ ಪ್ರತಿಮಾದೇವಿ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.