ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವು ಜ. ೨೦ರಂದು ಗೊನೆ ಕಡಿಯುವುದರೊಂದಿಗೆ ಆರಂಭಗೊಂಡಿದ್ದು, ಜ. ೨೬ರಂದು ಶ್ರೀ ದೇವರಿಗೆ ದೀಪೋತ್ಸವ, ಜ. ೨೭ರಂದು ಉಗ್ರಾಣ ತುಂಬಿಸಿ, ಬೆಳಿಗ್ಗೆ ೯ ಗಂಟೆಗೆ ಸುಳ್ಯ ಶ್ರೀ ರಾಮ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆ ನಡೆಯಲಿರುವುದು. ನಂತರ ತುಲಾಭಾರ ಸೇವೆ, ರಾತ್ರಿ ಭೂತ ಬಲಿ, ಜ. ೨೮ರಂದು ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಹಾಗೂ ರಂಗಪೂಜೆ ನಡೆಯಲಿರುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.