ನೆಟ್‌ವರ್ಕ್ ಸಮಸ್ಯೆಗೆ ಡಿ.ವಿ.ಎಸ್. ಸ್ಪಂದನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

ದೇವರಗುಂಡದಲ್ಲಿ ಏರ್‌ಟೆಲ್ ಟವರ್ : ಜ.25ರಂದು ಉದ್ಘಾಟನೆ

ಮಂಡೆಕೋಲು ಗ್ರಾಮದ ಮುರೂರು – ದೇವರಗುಂಡದಲ್ಲಿ ನಿರ್ಮಾಣಗೊಂಡಿರುವ ಏರ್‌ಟೆಲ್ ಟವರ್‌ನ ಉದ್ಘಾಟನೆಯು ಜ.25ರಂದು ನಡೆಯಲಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಇದರ ಉದ್ಘಾಟನೆ ಮಾಡಲಿದ್ದು, ರಾಜ್ಯ ಸಚಿವ ಎಸ್.ಅಂಗಾರರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಈ ಟವರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು ಇದೀಗ ಪೂರ್ಣಗೊಂಡಿದೆ.

ಬೆಳ್ಳಿಪ್ಪಾಡಿ – ದೇವರಗುಂಡದ ಈ ಭಾಗದಲ್ಲಿ ಬಿ.ಎಸ್.ಎನ್.ಎಲ್. ಟವರ್ ಇದೆ. ಆದರೆ ವಿದ್ಯುತ್ ಹೋದರೆ ಇಲ್ಲಿ ರೇಂಜ್ ಸಿಗುವುದಿಲ್ಲ. ಜನರೇಟರ್‌ಗೆ ಡೀಸೆಲ್ ಹಾಕಿ ಚಾಲೂ ಮಾಡುವ ವ್ಯವಸ್ಥೆ ಇಲ್ಲಿ ಇಲ್ಲ. ಕೊರೊನಾ ಲಾಕ್ ಡೌನ್ ಬಳಿಕ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ಆರಂಭಗೊಂಡಿತು. ಆದರೆ ನೆಟ್‌ವರ್ಕ್ ಸಮಸ್ಯೆ ಈ ಭಾಗದಲ್ಲಿ ವಿಪರೀತ ಇದ್ದುದರಿಂದ ಆನ್‌ಲೈನ್ ತರಗತಿಗಳಿಗೆ ತೊಡಕುಂಟಾಗಿತ್ತು. ಈ ಸಮಸ್ಯೆಯಿಂದ ಪಾರಾಗಲು ಬದಲಿ ಟವರ್ ವ್ಯವಸ್ಥೆ ಆಗಬೇಕಿತ್ತು. ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡ ಹಾಗೂ ಆ ಭಾಗದ ಯುವಕರು ದೇವರಗುಂಡದವರೇ ಆಗಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ನೆಟ್ ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿದಾಗ, ಊರವರ ಮನವಿಗೆ ಸ್ಪಂದಿಸಿದ ಡಿ.ವಿ.ಯವರು ಏರ್‌ಟೆಲ್ ಸಂಸ್ಥೆಯವರೊಂದಿಗೆ ಮಾತನಾಡಿ, ಮುರೂರು – ದೇವರಗುಂಡ ಭಾಗದಲ್ಲಿ ಟವರ್ ಆಗುವಂತೆ ಮಾಡಿದರು. ಇದೀಗ ಟವರ್‌ನ ಕೆಲಸ ಪೂರ್ಣಗೊಂಡಿದ್ದು ಜ.25ರಂದು ಶುಭಾರಂಭಗೊಳ್ಳಲಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.