ಜ. 25ರಂದು ಸುಳ್ಯದಲ್ಲಿ ನಡೆಯುವ ರಾಜ್ಯ ಮೀನುಗಾರಿಕಾ ಬಂದರು, ಒಳನಾಡು ಜಲಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್. ಅಂಗಾರ ಅವರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸುವ ಸುಳ್ಯ ತಾಲೂಕಿನ ಅಭಿಮಾನಿಗಳಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ ಕೆಳಗಿನಂತಿರುತ್ತದೆ.
ಅಜ್ಜಾವರ, ಮಂಡೆಕೋಲು ಭಾಗದಿಂದ ಬರುವ ವಾಹನಗಳನ್ನು ಕೆವಿಜಿ ಪುರಭವನದ ಒಳಗೆ ನಿಲ್ಲಿಸುವುದು, ದೊಡ್ಡತೋಟ, ಗುತ್ತಿಗಾರು, ಸುಬ್ರಹ್ಮಣ್ಯ ಭಾಗದಿಂದ ಮತ್ತು ಸುಳ್ಯ ನಗರದಿಂದ ಬರುವ ವಾಹನಗಳನ್ನು ಎ.ಪಿ.ಎಂ.ಸಿ. ಒಳಗಡೆ ನಿಲ್ಲಿಸುವುದು. ಜಾಲ್ಸೂರು ಮತ್ತು ಕನಕಮಜಲು ಭಾಗದಿಂದ ಬರುವ ವಾಹನಗಳನ್ನು ಯುವಜನ ಸಂಯುಕ್ತ ಮಂಡಳಿಯ ಮುಂಭಾಗದ ಮೈದಾನದಲ್ಲಿ ನಿಲ್ಲಿಸುವುದು. ಬೆಳ್ಳಾರೆ, ಪಂಜ, ಭಾಗದಿಂದ ಬರುವ ವಾಹನಗಳನ್ನು ಪ್ರಭು ಮೈದಾನದಲ್ಲಿ ನಿಲ್ಲಿಸುವುದು.
ಅರಂತೋಡು, ಸಂಪಾಜೆ, ಆಲೆಟ್ಟಿ, ಉಬರಡ್ಕ ಮಿತ್ತೂರು ಭಾಗದಿಂದ ಬರುವ ವಾಹನಗಳನ್ನು ಗಾಂಧಿನಗರ ಶಾಲಾ ಮೈದಾನದ ಬಳಿ ನಿಲ್ಲಿಸುವುದು.
ಸಮಾರಂಭಕ್ಕೆ ಆಗಮಿಸುವ ಗಣ್ಯ ಅತಿಥಿಗಳ ವಾಹನಗಳನ್ನು ರಥಬೀದಿಯಲ್ಲಿರುವ ಪ್ರಕಾಶ್ ಥಿಯೇಟರ್ ಬಳಿಯ ಮೈದಾನದಲ್ಲಿ ನಿಲ್ಲಿಸುವುದು. ರೋಟರಿ ಶಾಲೆಯ ಮುಂದಕ್ಕೆ ಎ.ಪಿ.ಎಂ.ಸಿ. ತನಕ ಸಾರ್ವಜನಿಕ ವಾಹನಗಳಿಗೆ ಅವಕಾಶ ಇರುವುದಿಲ್ಲ. ಹಾಗೂ ಅಪರಾಹ್ನ ಮೂರು ಗಂಟೆಯ ಬಳಿಕ ರಥಬೀದಿಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.
ಈ ಸೂಚನೆಗಳನ್ನು ಎಲ್ಲರೂ ಗಮನಿಸಿ ಪೊಲೀಸ್ ಇಲಾಖೆಯೊಂದಿಗೆ ಮತ್ತು ಸ್ವಯಂಸೇವಕರೊಂದಿಗೆ ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಸಾರ್ವಜನಿಕ ಅಭಿನಂದನಾ ಸಮಿತಿಯ ಸಂಘಟಕರು ತಿಳಿಸಿದ್ದಾರೆ.