ಕರ್ನಾಟಕ ಸರ್ಕಾರ ದ ಮಾನ್ಯ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ರವರನ್ನು ಬಡ್ಡಡ್ಕ ಬಿ .ಜೆ.ಪಿ ಬೂತ್ ಸಮಿತಿ ವತಿಯಿಂದ ಅಭಿನಂದಸಲಾಯಿತು.
ಈ ಸಂದರ್ಭದಲ್ಲಿ ಆಲೆಟ್ಟಿ -ಕೂರ್ನಡ್ಕ ಭಾಗದ ರಸ್ತೆ ಅಭಿವೃದ್ಧಿಯ ಬಗ್ಗೆ ಹಾಗೂ ಸರಕಾರಿ ಬಸ್ ಸಂಚಾರ ಮತ್ತು ನೆಟ್ ವರ್ಕ್ ಸಮಸ್ಯೆಯ ಕುರಿತು ,ಕುಡಿಯುವ ನೀರಿನ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆ ಕುರಿತಂತೆ ಮನವಿ ಸಲ್ಲಿಸಲಾಯಿತು. ಸದ್ರಿ ಮನವಿ ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾನ್ಯ ಸಚಿವರು ಶೀಘ್ರದಲ್ಲೇ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹರೀಶ್ ರಂಗತ್ತಮಲೆ, ದಿನೇಶ್ ಬಡ್ಡಡ್ಕ,ಹೇಮನಾಥ ಬಡ್ಡಡ್ಕ , ಗಂಗಾಧರ ಬಡ್ಡಡ್ಕ, ಪುಂಡರೀಕ ಕಾಪುಮಲೆ, ಶಿವರಾಮ ಕಾಪುಮಲೆ, ನಾಗರಾಜ ಬಡ್ಡಡ್ಕ, ವೆಂಕಟ್ರಮಣ ದೋಣಿಮೂಲೆ, ಕಮಲಾಕ್ಷ ಕೆ.ಬಡ್ಡಡ್ಕ ಮತ್ತಿತರರು ಉಪಸ್ಥಿತರಿದ್ದರು.