ಬೆಳ್ಳಾರೆ ಗ್ರಾಮದ ನೆಟ್ಟಾರು ಕಿನ್ನಿಮಜಲು ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಶ್ರೀ ಕೊರಗಜ್ಜ ದೈವದ ಘಂಟೆ ತೆಂಬರೆಯಲ್ಲಿ ಕೋಲೋತ್ಸವವು ಫೆ.03 ರಂದು ನಡೆಯಲಿದೆ.
ಫೆ.03 ರಂದು ಬುಧವಾರ ರಾತ್ರಿ ಗಂಟೆ 7.00 ಕ್ಕೆ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಮಂತ್ರದೇವತೆ ದೈವದ ಅಗೇಲು ಸೇವೆ ನಡೆಯಲಿದೆ. ರಾತ್ರಿ ಗಂಟೆ 8.00 ಕ್ಕೆ ಕೊರಗಜ್ಜ ದೈವದ ಕೋಲ ನಡೆಯಲಿದೆ. ರಾತ್ರಿ ಗಂಟೆ 9.00 ಕ್ಕೆ ಅನ್ನದಾನ ನಡೆಯಲಿದೆ. ಆ ಪ್ರಯುಕ್ತ ಭಕ್ತಾಭಿಮಾನಿಗಳು ಈ ಪುಣ್ಯಕಾರ್ಯಕ್ಕೆ ಆಗಮಿಸಿ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಕೃಷ್ಣಪ್ಪ ಮೂಲ್ಯ ಕಿನ್ನಿಮಜಲುರವರು ತಿಳಿಸಿದ್ದಾರೆ.