Breaking News

ಫೆ.19 ರಂದು ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನ

Advt_Headding_Middle

 

ಎನ್ನೆಂಸಿಯ ವಠಾರದಲ್ಲಿ ನುಡಿ ಹಬ್ಬಕ್ಕೆ ಸಿದ್ಧತೆ

ಡಾ.ಪೂವಪ್ಪ ಕಣಿಯೂರು ಸರ್ವಾಧ್ಯಕ್ಷತೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ವಾಗತ ಸಮಿತಿ 25ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ ಹಾಗೂ ವಿವಿಧ ಸಂಘ ಗಳ ಸಹಕಾರದೊಂದಿಗೆ ಸುಳ್ಯ ತಾಲೂಕು 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ. 19 ರಂದು ಸುಳ್ಯದ ನೆಹರು ಸ್ಮಾರಕ ಮಹಾವಿದ್ಯಾಲಯದ ಕುರುಂಜಿ ಮಹಾಲಿಂಗ ಮಾಸ್ತರ್ ಸಭಾಂಗಣದ ಕೆ.ವಿ.ಜಿ ಷಷ್ಟ್ಯಬ್ಧ ರಂಗಮಂದಿರ ವೇದಿಕೆಯಲ್ಲಿ ನಡೆಯಲಿದೆ.

ಹಿರಿಯ ಸಾಹಿತಿ ಡಾ.ಪೂವಪ್ಪ ಕಣಿಯೂರು ಈ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ಹಾಗೂ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಾ ಕೋಲ್ಚಾರ್ ತಿಳಿಸಿದರು.

ಫೆ.13 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.

ಬೆಳಗ್ಗೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಬಾಗದಿಂದ ಆರಂಭಗೊಳ್ಳಲಿರುವ ಕನ್ನಡ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಅಕ್ಷಯ್ ಕುರುಂಜಿ ಚಾಲನೆ ನೀಡಲಿದ್ದಾರೆ.
ಸಮ್ಮೇಳನದ ಸಭಾಂಗಣದ ಮುಂಭಾಗದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಪರಿಷತ್ತಿನ ಧ್ವಜಾರೋಹಣವನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹಾಗೂ ಕನ್ನಡ ಧ್ವಜಾರೋಹಣವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದಾರೆ.

25 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಸಮ್ಮೇಳನದ ಸರ್ವಾಧ್ಯಕ್ಷರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ. ಸಚಿವ ಎಸ್.ಅಂಗಾರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ನೂತನ ಕೃತಿಗಳನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಬಿಡುಗಡೆಗೊಳಿಸಲಿದ್ದಾರೆ. ಸಮ್ಮೇಳನದ ಸವಿನೆನಪಿಗಾಗಿ ಹೊರತರಲಿರುವ ಸ್ಮರಣ ಸಂಚಿಕೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದರು ಅನಾವರಣಗೊಳಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಉಪಸ್ಥಿತರಿರುತ್ತಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಕೃ.ಶಾ.ಮರ್ಕಂಜ ಮಾತನಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ಡಾ.ಪೂವಪ್ಪ ಕಣಿಯೂರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.
25ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಮತಿ ವಿಮಲಾರುಣ ಪಡ್ಡಂಬೈಲುರವರ ಮಿಂಚು ಹುಳು (ಕವನ ಸಂಕಲನ),ಶ್ರೀಮತಿ ಸ್ಮಿತಾ ಅಮೃತರಾಜ್ ರ ಒಂದು ವಿಳಾಸದ ಹಿಂದೆ (ಸಂಕಲನ ಪ್ರಬಂಧ),ಮಾತು ಮೀಟಿ ಹೋಗುವ ಹೊತ್ತು (ಕವನ ಸಂಕಲನ),ಹೊತ್ತಗೆ ಹೊತ್ತು(ಪುಸ್ತಕ ವಿಮರ್ಶೆ) ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕರ ಎಲೆಯ ಮರೆಯಲಿ(ಲೇಖನ-ಕತೆಗಳ ಮಾಲಿಕೆ),
ಡಾ.ಪ್ರಭಾಕರ ಶಿಶಿಲರ ಯುರೋಪಿನಲ್ಲಿ ಎಂಟು ವಾರ(ಪ್ರವಾಸ ಕಥನ),ನಮ್ಮೂರ ಜನಪದರು(ಲಲಿತ ಪ್ರಬಂಧ)ಬAಡಾಯದ ಕತೆಗಳು(ಕಥಾ ಸಂಕಲನ) ಡಾ.ಪ್ರತಿಮಾ ಜಯರಾಂರ ಕೊಡಗು ಕೆನರಾ ಬಂಡಾಯ(ಸಂಶೋಧನಾ ನಿಬಂಧ) ಹೀಗೆ ಒಟ್ಟು 9 ಪುಸ್ತಕಗಳು ಬಿಡುಗಡೆಗೊಳ್ಳಲಿವೆ.

ಕವಿಗೋಷ್ಠಿ ಮಧ್ಯಾಹ್ನ 12.30 ರಿಂದ 1.30ರವರೆಗೆ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವ ಕವಯಿತ್ರಿ ಶ್ರೀಮತಿ ಸಂಗೀತಾ ರವಿರಾಜ್ ಹೊಸೂರು ವಹಿಸಲಿದ್ದಾರೆ. ಪೂರ್ಣಿಮಾ ಮಡಪ್ಪಾಡಿ, ಸಾನು ಉಬರಡ್ಕ,ವಿಜಯಕುಮಾರ್ ಕಾಣಿಚ್ಚಾರ್,ಸಂಕೀರ್ಣ ಚೊಕ್ಕಾಡಿ, ಯೋಗೀಶ್ ಹೊಸೊಳಿಕೆ,ಪ್ರಣೀತಾ ಬೆಳ್ಳೂರು,ಅಭಿಷೇಕ್. ಎ ಹಾಗೂ ಅಭಿಜಿತ್. ಕೆ.ಜೆ ಮ್ಮ ಸ್ವರಚಿತ ಕವನಗಳನ್ನು ಓದಲಿದ್ದಾರೆ.

ಮಧ್ಯಾಹ್ನ 1.30 ರಿಂದ 2.30 ರವರೆಗೆ ನೆಹರು ಸ್ಮಾರಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ನೃತ್ಯ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.
ಮಧ್ಯಾಹ್ನ 2.30ರಿಂದ 3.00ರವರೆಗೆ ಅಗಲಿದ ಸಾಹಿತಿಗಳಿಗೆ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ನಮ್ಮನ್ನಗಲಿರುವ ನಾಟಕ ನಿರ್ದೇಶಕ, ನಟ,ಸಾಹಿತಿ ಮೋಹನ್ ಸೋನಾ ಮತ್ತು ಚಿತ್ರ ಕಲಾವಿದ ಮಹಾಬಲ ಕುಳ ರವರಿಗೆ ಖ್ಯಾತ ನಾಟಕ ನಿರ್ದೇಶಕ ಜೀವನ್ ರಾಂ ಸುಳ್ಯ ರವರು ನುಡಿ ನಮನ ಸಲ್ಲಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಸಾಹಿತ್ಯ-ಸಂವಾದ ಗೋಷ್ಠಿಯ ಸಮನ್ವಯಕಾರರಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಫ್ರೊ.ಅಭಯಕುಮಾರ್ ಯವರು ಭಾಗವಹಿಸಲಿದ್ದಾರೆ.
ಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಪೆರಾಜೆ, ಶಿಕ್ಷಕ-ಬರಹಗಾರ ಅರವಿಂದ ಚೊಕ್ಕಾಡಿ, ಬರಹಗಾರ್ತಿ ಶ್ರೀಮತಿ ಸ್ಮಿತಾ ಅಮೃತರಾಜ್, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಪಾಲ್ಗೊಳ್ಳಲಿದ್ದಾರೆ.
ಸಂಜೆ 4.00 ಕ್ಕೆ ನಡೆಯಲಿರುವ ಸಮಾರೋಪ ಮತ್ತು ಕನ್ನಡ ಕಸ್ತೂರಿ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಪ್ರದೀಪ ಕುಮಾರ ಕಲ್ಕೂರ ವಹಿಸಲಿದ್ದಾರೆ. ಸಾಹಿತಿ-ಚಿಂತಕ ತಾಳ್ತಜೆ ಡಾ. ವಸಂತಕುಮಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಕನ್ನಡ ಕಸ್ತೂರಿ ಸನ್ಮಾನಕ್ಕೆ ಭಾಜನರಾದವರನ್ನು ಡಾ.ಕೆ.ವಿ.ಚಿದಾನಂದರು ಸನ್ಮಾನಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಖ್ಯಾತ ನಟ, ನಿರ್ದೇಶಕ ಶಿವಧ್ವಜ್ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಉಪಸ್ಥಿತರಿರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 12 ಜನ ಗೌರವಾನ್ವಿತರನ್ನು ಕನ್ನಡ ಕಸ್ತೂರಿ ಸನ್ಮಾನದೊಂದಿಗೆ ಗೌರವಿಸಲಾಗುತ್ತದೆ.ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ.ವಿಶ್ವನಾಥ ಬದಿಕಾನ,ಉದ್ಯಮದಲ್ಲಿನ ಸಾಧನೆಗಾಗಿ ಸುರೇಶ್ಚಂದ್ರ ಕಮಿಲ,ಧಾರ್ಮಿಕ ಕ್ಷೇತ್ರದಲ್ಲಿ ಲಿಂಗಪ್ಪ ಗೌಡ ಕೇರ್ಪಳ, ಪತ್ರಿಕೋದ್ಯಮದಲ್ಲಿ ಜೆ.ಕೆ.ರೈ, ಸಮಾಜ ಸೇವೆಗಾಗಿ ಶ್ರೀಮತಿ ಸುಮಾ ಸುಬ್ಬರಾವ್, ಯಕ್ಷಗಾನಕ್ಕಾಗಿ ಜಯಾನಂದ ಸಂಪಾಜೆ, ಸಹಕಾರಕ್ಕಾಗಿ ನಿತ್ಯಾನಂದ ಮುಂಡೋಡಿ, ಶಿಲ್ಪಕಲೆಗಾಗಿ ನಾಗೇಂದ್ರ. ಎನ್. ಅರಂತೋಡು, ವೈದ್ಯಕೀಯಕ್ಕಾಗಿ ಡಾ.ಗೀತಾ ದೊಪ್ಪ, ಭೂತಾರಾಧನೆಗಾಗಿ ಸುಬ್ಬ ಪರವ ಕುಕ್ಕುಜಡ್ಕ,ಉದ್ಯೋಗ-ತರಭೇತಿಗಾಗಿ ಮನೋಜ್ ಮಡ್ತಿಲ, ಕ್ರೀಡೆಗಾಗಿ ರಾಧಾಕೃಷ್ಣ ಮಾಣಿಬೆಟ್ಟು ಕನ್ನಡ ಕಸ್ತೂರಿ ಸನ್ಮಾನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಅಕ್ಷಯ್ ಕೆ.ಸಿ., ಕ.ಸಾ.ಪ. ಕೋಶಾಧಿಕಾರಿ ದಯಾನಂದ ಆಳ್ವ, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ರಜತ್ ಅಡ್ಕಾರ್ ಇದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.