ದೇವಚಳ್ಳ ಗ್ರಾ.ಪಂ. ಅಧ್ಯಕ್ಷರಾಗಿ ಸ್ವಾಭಿಮಾನಿ ಬಳಗದ ಸುಲೋಚನಾ ದೇವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ದೇವಚಳ್ಳ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಸ್ವಾಭಿಮಾನಿ ಬಳಗದ ಸುಲೋಚನಾ ದೇವ ಅವರು ಆಯ್ಕೆಗೊಂಡಿದ್ದಾರೆ.


ಇಂದು ಚುನಾವಣೆ ನಡೆದಾಗ ಸುಲೋಚನಾ ದೇವ ಅವರಿಗೆ 6 ಮತಗಳು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮಲತಾ ಕೇರ ಅವರಿಗೆ 4ಮತಗಳು ಲಭಿಸಿತ್ತು.
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷತೆ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ನಿಗದಿಯಾಗಿತ್ತು. ಆದರೆ ಆ ಕೆಟಗರಿಗೆ ಬರುವ ಸದಸ್ಯರು ಇಲ್ಲಿ ಇರಲಿಲ್ಲ. ಎ ಮಹಿಳೆ ಅರ್ಹರಾಗುವರೇ ಎಂಬ ಜಿಜ್ಞಾಸೆ ಎದ್ದಿತ್ತು. ಈ ಕುರಿತಂತೆ ಸದಸ್ಯ, ಸ್ವಾಭಿಮಾನಿ ಬಳಗದ ಶೈಲೇಶ್ ಅಂಬೆಕಲ್ಲುರವರು ಜಿಲ್ಲಾಧಿಕಾರಿ ಗೆ ಪತ್ರ ಬರೆದು, ಲಿಖಿತ ಆದೇಶ ನೀಡಬೇಕೆಂದು ಕೇಳಿಕೊಂಡಿದ್ದರು.
ಅದರಂತೆ ಫೆ.18ರಂದು ಜಿಲ್ಲಾಧಿಕಾರಿ ಗಳು ಪತ್ರಕ್ಕೆ ಉತ್ತರಿಸಿ ಚುನಾವಣಾ ಕಾನೂನಿನ ಪ್ರಕಾರ ಬಿ ವರ್ಗದವರು ಇಲ್ಲದಿದ್ದರೆ ಆ ಸ್ಥಾನಕ್ಕೆ ಎ ವರ್ಗದವರನ್ನು ಆಯ್ಕೆ ಮಾಡಬಹುದು ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದರು. ಅದರಂತೆ ಚುನಾವಣಾಧಿಕಾರಿ ರಶ್ಮಿಯವರು ನೋಟೀಸ್ ಮಾಡಿ ಇಂದು ಅಧ್ಯಕ್ಷತೆ ಚುನಾವಣೆಗೆ ದಿನ ನಿಗದಿ ಪಡಿಸಿದ್ದರು.
ಅದರಂತೆ ಮೀಸಲಾತಿ ಎ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್ ನ ಸುಲೋಚನಾ ದೇವ ಮತ್ತು ಬಿಜೆಪಿ ಯ ಪ್ರೇಮಲತಾ ಕೇರ ಅರ್ಹರಾಗಿದ್ದರು.
ದೇವಚಳ್ಳ ಗ್ರಾಮ ಪಂಚಾಯತ್ ಗೆ ಒಟ್ಟು 1೦ ಸದಸ್ಯರು ಆಯ್ಕೆಗೊಂಡಿದ್ದು, ಸ್ವಾಭಿಮಾನಿ ಬಳಗದಿಂದ , ಬಿಜೆಪಿಯಿಂದ 4 ಕಾಂಗ್ರೆಸ್ ನಿಂದ ಒಬ್ಬರು ಆಯ್ಕೆ ಗೊಂಡರು.
ಇಂದು ಬೆಳಿಗ್ಗೆ ಅಧ್ಯಕ್ಷತೆ ಚುನಾವಣೆಯ ಸ್ಪರ್ಧಿ ಸುಲೋಚನಾ ದೇವರವರು ಸ್ವಾಭಿಮಾನಿ ಬಳಗಕ್ಕೆ ಸೇರ್ಪಡೆಯಾಗಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.