ಸಂಸದರ ಆದರ್ಶ ಗ್ರಾಮವಾದ ಬಳ್ಪ ಗ್ರಾಮದ ಅಡ್ಡಬೈಲು – ಬೀದಿಗುಡ್ಡೆ – ಬೋಗಾಯನಕೆರೆ ರಿಂಗ್ ರೋಡ್ ಅಭಿವೃದ್ಧಿಗೆ ಗುದ್ದಲಿ ಪೂಜೆ ಮತ್ತು5 ಮನೆಗಳನ್ನು ನೀಡುವ ಕಾರ್ಯಕ್ರಮ ಫೆ. 26ರಂದು ನಡೆಯಿತು.
ಸಚಿವ ಎಸ್. ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಚಿವರುಗಳಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮನೆ ದಾನಿ ಇಂಗ್ಲೆಂಡ್ ನಲ್ಲಿ ಉದ್ಯಮಿಯಾಗಿರುವ ರಾನ್ ರೋಡ್ರಿಗಸ್, ಕ್ಯುಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿ.ಪಂ. ಸದಸ್ಯೆ ಶ್ರೀಮತಿ ಆಶಾ ತಿಮ್ಮಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಹರಿಶ್ ಕಂಜಿಪಿಲಿ, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಬಳ್ಪ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕುಸುಮಾ ಎಸ್. ರೈ, ಮೊಗ್ರೊಡಿ ಕನ್ ಸ್ಟ್ರಕ್ಷನ್ ನ ಸುಧಾಕರ ಶೆಟ್ಟಿ, ಗ್ರಾಮ ಸಡಕ್ ಇಂಜಿನಿಯರ್ ಶ್ರೀನಿವಾಸ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇನ್ಯ ಶಾಲಾ ಮುಖ್ಯ ಶಿಕ್ಷಕಿ ಕು. ರೇವತಿ ಪ್ರಾರ್ಥಿಸಿದರು.
ಬಳ್ಪ ಕೇನ್ಯ ಗ್ರಾಮ ವಿಕಾಸ ಟ್ರಸ್ಟ್ ಅಧ್ಯಕ್ಷ ವಿನೋದ್ ಬೊಳ್ಮಲೆ ಸ್ವಾಗತಿಸಿದರು. ಮಾಜಿ ಗ್ರಾ.ಪಂ. ಸದಸ್ಯ ರಮಾನಂದ ಎಣ್ಣೆಮಜಲು ವಂದಿಸಿದರು. ಪಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಕಾರ್ಯಕ್ರಮ ನಿರೂಪಿಸಿದರು.