ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಗರಡಿಯಲ್ಲಿ ಫೆ.26.ರಂದು ರಾತ್ರಿ ಶ್ರೀಆದಿ ಬೈದರುಗಳ ನೇಮೋತ್ಸವವು ಜರುಗಿತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು , ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣ ಗೌಡ ಕೋರ್ಜೆ, ದಿನೇಶ್ ಗರಡಿ,ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ರಾಮಚಂದ್ರ ಭಟ್, ಶ್ರೀಮತಿ ಸೌಮ್ಯ ಪಿ ಆರ್, ಶ್ರೀಮತಿ ರೋಹಿಣಿ ಆರ್ನೋಜಿ , ಹಾಗೂ ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.