ಬ್ಲಾಕ್ ಕಾಂಗ್ರೆಸ್‌ಗೆ ನೂತನ ಸಾರಥ್ಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಧ್ಯಕ್ಷರಾಗಿ ಪಿ.ಸಿ.ಜಯರಾಮ್ ಅಧಿಕಾರ ಸ್ವೀಕಾರ

ಗ್ರಾಮ ಗ್ರಾಮದಲ್ಲಿ ಪಕ್ಷ ಸಂಘಟನೆಗೆ ಒತ್ತು : ಪಿ.ಸಿ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪಿ.ಸಿ.ಜಯರಾಮ್ ಅವರು ಇಂದು ಅಧಿಕಾರ ಸ್ವೀಕರಿಸಿದರು.

ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಬ್ಲಾಕ್ ಮಟ್ಟದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈಯವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಪಿ.ಸಿ.ಜಯರಾಮರು, ಬ್ಲಾಕ್ ಕಾಂಗ್ರೆಸ್ ನ್ನು ಬೆಳೆಸುವ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲಿ ತಿರುಗಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.

ನನ್ನ ಹೆಸರು ಅಧ್ಯಕ್ಷತೆಗೆ ಪರಿಗಣನೆಗೆ ಬಂದಾಗ ನಾನು ಹುದ್ದೆ ಬೇಡ ಎಂದು ಹೇಳಿದ್ದು ಹೌದು. ಅದಕ್ಕೆ ನನ್ನ ವೈಯಕ್ತಿಕ ಕಾರಣವೂ ಇದೆ. ಯಾಕೆಂದರೆ ಒಂದು ಜವಾಬ್ದಾರಿ ವಹಿಸಿಕೊಂಡ ಮೇಲೆ ಅದಕ್ಕೆ ನ್ಯಾಯ ಒದಗಿಸುವಂತೆ ಕೆಲಸ ಮಾಡಬೇಕು. ಆದರೂ ಪಕ್ಷದ ನಾಯಕರು, ನೀವೆಲ್ಲರೂ ಸೇರಿ ಈ ಸ್ಥಾನ ನೀಡಿದ್ದೀರಿ. ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಮಾತನಾಡಿ, ಮೂರು ವರ್ಷಗಳ ಕಾಲ ಎಲ್ಲ ಸವಾಲುಗಳನ್ನು ಎದುರಿಸಿ ಕಷ್ಟ ಪಟ್ಟು ಅಧಿಕಾರ ನಿರ್ವಹಿಸಿದ್ದೇನೆ. ನನ್ನ ಅವಧಿಯ ಮೂರು ವರ್ಷ ಮುಗಿದ ಕೂಡಲೇ ನಾನು ಜಿಲ್ಲೆಯ ನಾಯಕರಿಗೆ ಬದಲಾವಣೆ ಮಾಡುವಂತೆ ಹೇಳಿದ್ದೆ. ಇಂದು ನಮ್ಮ ಬ್ಲಾಕ್ ಗೆ ಅರ್ಹರನ್ನೇ ಅಧ್ಯಕ್ಷರನ್ನಾಗಿಸಿದ್ದಾರೆ ಎಂದು ಹೇಳಿದ ರೈಯವರು ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಹೇಳಿದರು. ನಂದರಾಜ್ ಸಂಕೇಶ ಹಾಗೂ ಭವಾನಿಶಂಕರ್ ಕಲ್ಮಡ್ಕರನ್ನು ವೇದಿಕೆಗೆ ಕರೆದು ಜಯಪ್ರಕಾಶ್ ರೈಯವರು ಸನ್ಮಾನಿಸಿದರು.

ಕೆ.ಪಿ.ಸಿ.ಸಿ. ಕಾರ್ಯದರ್ಶಿ ಗಳಾದ ಭರತ್ ಮುಂಡೋಡಿ, ಟಿ.ಎಂ. ಶಹೀದ್, ಸುಳ್ಯ ಬ್ಲಾಕ್‌ನ ಉಸ್ತುವಾರಿ ಕೃಷ್ಣಪ್ಪ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ.ಬಿ.ರಘು ಪಿ.ಸಿ.ಜಯರಾಮರನ್ನು ಅಭಿನಂದಿಸಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ವೇದಿಕೆಯಲ್ಲಿ ದ್ದರು. ಕೆ.ಗೋಕುಲ್‌ದಾಸ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.