ನಿವೃತ್ತ ಡಿವೈಎಸ್ಪಿ ಮೈಸೂರಿನಲ್ಲಿ ನೆಲೆಸಿರುವ ಗಂಗರಾಜ್ ನಾಗೋಜಿಯವರು ಅಪಘಾತದಲ್ಲಿ ತೀವ್ರ ಜಖಂಗೊಂಡು ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಫೆ. 25 ರಂದು ರಾತ್ರಿ ಮೈಸೂರಿನಲ್ಲಿ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಇವರಿಗೆ ತೀವ್ರ ಜಖಂ ಆಗಿತ್ತು. ನಿನ್ನೆ ರಾತ್ರಿ ಅವರು ನಿಧನರಾದರು.
ಗಂಗರಾಜ್ರವರು ಸುಳ್ಯ ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ದಿ. ಕೋಡ್ತುಗುಳಿ ಚಿನ್ನಪ್ಪ ಗೌಡರ ಪುತ್ರಿ ಪದ್ಮಿನಿಯವರ ಪತಿ.