ಬೆಳ್ಳಾರೆ ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಅವರು ಜಿ.ಪಂ.ನಿಧಿಯಿಂದ ಮಂಜೂರು ಮಾಡಿದ ಅನುದಾನದಡಿ ಪೆರುವಾಜೆ ಗ್ರಾಮದ ಕುಂಡಡ್ಕ-ಅಡ್ಯತಕಂಡ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಫೆ.27 ರಂದು ಚಾಲನೆ ನೀಡಲಾಯಿತು.
2.50 ಲಕ್ಷ ರೂ.ವೆಚ್ಚದ ಅನುದಾನದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ತಿರುವು ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಬಹುಕಾಲದ ಬೇಡಿಕೆಗೆ
ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಅವರು ತಕ್ಷಣ ಅನುದಾನ ಒದಗಿಸಿದ್ದಾರೆ. ನೆಲ ಸಮತ್ತಟ್ಟು ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಕಾಮಗಾರಿ ಪ್ರಗತಿಯಲ್ಲಿದೆ.
ಹೆಚ್ಚುವರಿ ಅನುದಾನ
ಒದಗಣನೆ
ರಸ್ತೆ ಅಭಿವೃದ್ಧಿ 2.50 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ತಿಳಿಸಿದ್ದಾರೆ.