ಮುಕ್ಕೂರು ವಾರ್ಡ್ :ರಸ್ತೆ ವಿಸ್ತರಣೆ, ಟ್ಯಾಂಕ್ ದುರಸ್ತಿ1

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮುಕ್ಕೂರು ವಾರ್ಡ್ ನ ಗ್ರಾ.ಪಂ.ಸದಸ್ಯರ ಅನುದಾನಡಿ ಅನವುಗುಂಡಿ ಕಾಲನಿ ಸಂಪರ್ಕ ರಸ್ತೆ ಹಾಗೂ ಮುಕ್ಕೂರು- ಅಡ್ಯತಕಂಡ ಸಂಪರ್ಕ ರಸ್ತೆಯ ಆಯ್ದ ಸ್ಥಳದಲ್ಲಿ ವಿಸ್ತರಣೆ ಕಾಮಗಾರಿ ನಡೆಯಿತು. ವಾರ್ಡ್ ಸದಸ್ಯ, ಪೆರುವಾಜೆ ಗ್ರಾ.ಪಂ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಅನುದಾನ ಒದಗಿಸಿದ್ದು ಅವರ ಉಪಸ್ಥಿತಿಯಲ್ಲಿ ಕಾಮಗಾರಿ ನಡೆಯಿತು.

45 ಸಾವಿರ ರೂ. ಅನುದಾನದಲ್ಲಿ
ಅನವುಗುಂಡಿ ಕಾಲನಿ ರಸ್ತೆ ವಿಸ್ತರಣೆ , 18 ಸಾವಿರ ರೂ. ಅನುದಾನದಲ್ಲಿ ಮುಕ್ಕೂರು-ಅಡ್ಯತಕಂಡ ರಸ್ತೆಯ ಆಯ್ದ ಕಡೆ ವಿಸ್ತರಣೆ ಕಾಮಗಾರಿ ನಡೆಯಿತು.

ಕುವೆತ್ತಡ್ಕ : ಟ್ಯಾಂಕಿ ದುರಸ್ತಿ

ಹಲವು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಹೊಂದಿರುವ ಕಾನಾವು ಕುವೆತ್ತಡ್ಕದ ಕುಡಿಯುವ ನೀರಿನ ಟ್ಯಾಂಕ್ ಅನ್ನು 20 ಸಾವಿರ ರೂ.ವೆಚ್ಚದಲ್ಲಿ ದುರಸ್ತಿ ಪಡಿಸಲಾಯಿತು. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮಾರು ಅವರು ಕಾಮಗಾರಿಗೆ ಅನುದಾನ ಒದಗಿಸಲು ಶ್ರಮಿಸಿದರು.

ನವ ಮುಕ್ಕೂರು ವಾರ್ಡ್ ಪೂರಕವಾಗಿ ಹತ್ತಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಲಭ್ಯ ಅನುದಾನ ಬಳಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ವಾರ್ಡ್ ಕಾಮಗಾರಿ ಪ್ರಗತಿ ಪರಿಶೀಲನೆಯ ಸಂದರ್ಭ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.