ಲಯನ್ಸ್ 317 ಡಿ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ. ಗೀತಾ ಪ್ರಕಾಶ್ ಎ. pmjf ಅಧಿಕೃತ ಭೇಟಿಯು ಫೆ. 27 ರಂದು ಸಂಪಾಜೆ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಿದ ಇಂಟರ್ಲಾಕ್ ನೆಲಹಾಸನ್ನು ಉದ್ಘಾಟಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಚೆಂಬು ಹೈಸ್ಕೂಲ್ ಬಡ ವಿದ್ಯಾರ್ಥಿ ಕುಮಾರಿ ಹರ್ಷಶ್ರೀ ಎಂ.ವೈ. ಇವರಿಗೆ ಧನಸಹಾಯ ನೀಡಲಾಯಿತು. ಡಿಜಿಟಲ್ ಸಾಕ್ಷರತಾ ಪ್ರಶಿಕ್ಷಣದಲ್ಲಿ ಉಚಿತವಾಗಿ ತರಭೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಪಾಜೆ ಲಯನ್ಸ್ ಕ್ಲಬ್ನ ಅಧ್ಯಕ್ಷ ಲಯನ್ ವಾಸುದೇವ ಕಟ್ಟೆಮನೆ, ಜಿಲ್ಲಾ ಪ್ರಥಮ ಮಹಿಳೆ ಲಯನ್ ಗಾಯತ್ರಿ ಗೀತಪ್ರಕಾಶ್, ಪ್ರಾಂತೀಯ ಅಧ್ಯಕ್ಷರಾದ ಲಯನ್. ಸಂತೋಷ್ ಕುಮಾರ್ ಶೆಟ್ಟಿ ವಲಯಾಧ್ಯಕ್ಷೆ ಲಯನ್ ಸಂದ್ಯಾ ಸಚಿತ್ ರೈ, ಸಂಪಾಜೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಉಪಸ್ಥಿತರಿದ್ದರು. ಪುಟಾಣಿ ಅಕ್ಷರ ಟಿ ಅಪ್ಪಣ್ಣ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಲಯನ್ ಶ್ರೀಮತಿ ಅಮೃತಾ ಅಪ್ಪಣ್ಣ ನಿರೂಪಿಸಿ, ಲಯನ್ ವೆಂಕಪ್ಪ ಬೊಳ್ಳೂರು ವಂದಿಸಿದರು.