ಅಮರಮುಡ್ನೂರು ಗ್ರಾಮ ಪಂಚಾಯತ್ ನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2020-21 ನೇ ಸಾಲಿನ ಎರಡನೇ ಹಂತದ 14 ನೇ ಹಣಕಾಸು ಯೋಜನೆಯ ವಿಶೇಷ ಗ್ರಾಮ ಸಭೆಯು ಮಾ.3 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ಮೇಲ್ತೋಟ ವಹಿಸಿದ್ದರು. ನೊಡೆಲ್ ಅಧಿಕಾರಿಯಾಗಿ ಸಹಾಯಕ ನಿರ್ದೇಶಕ ಅಕ್ಷರ ದಾಸೋಹ ಚಂದ್ರಶೇಖರ ಪೇರಾಲು ರವರು ನಿರ್ವಹಿಸಿದರು.ಜಿ.ಪಂ.ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ, ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ಕೇನಡ್ಕ, ಪಂ.ಪಿ.ಡಿ.ಒ. ಆಕಾಶ್, ಕಾರ್ಯದರ್ಶಿ ದಯಾನಂದ ಪತ್ತುಕುಂಜ, ತಾಲೂಕು ಸಾಮಾಜಿಕ ಪರಿಶೋಧನೆಯ ಸಂಯೋಜಕ ಪ್ರವೀಣ್, ಸಂಪನ್ಮೂಲ ವ್ಯಕ್ತಿ ಜಯರಾಮ, ದಿವ್ಯ, ಸಂಧ್ಯಾ, ಸುರೇಶ್, ತಾಂತ್ರಿಕ ಸಹಾಯಕ ಅಭಿಯಂತರ ಆತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಫಲಾನುಭವಿಗಳು ಭಾಗವಹಿಸಿದ್ದರು.