ನೆಹರು ಮೆಮೋರಿಯಲ್ ಕಾಲೇಜಿನ ಪ್ಲೇಸ್ಮೆಂಟ್ & ಕೆರಿಯರ್ ಗೈಡೆನ್ಸ್ ಸೆಲ್ ವತಿಯಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಕೌಶಲ್ಯದ ಬಗ್ಗೆ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಇತ್ತೀಚೆಗೆ ನಡೆಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಮೀನ, ಫ್ರೀಲೆನ್ಸ್ಕೌನ್ಸಲರ್ ಮತ್ತು ಜೀವನಕೌಶಲ್ಯ ತರಬೇತುದಾರರು, ಉದ್ಯೋಗ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ಇರಬೇಕಾದ ಮತ್ತು ಅನುಸರಿಸಬೇಕಾದ ತಂತ್ರಗಳ ಕುರಿತಂತೆ ತಿಳಿಯಪಡಿಸಿದರು.
ಪ್ರಾಂಶುಪಾಲರಾದ ಡಾ.ಪೂವಪ್ಪಗೌಡ ಕೆ ರವರಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತಿಮ ವಾಣಿಜ್ಯ ಪದವಿಯ ವಿದ್ಯಾರ್ಥಿಗಳಾದ ಅನುಶಾಲಕ್ಷ್ಮಿ ಮತ್ತು ತಂಡ ಪ್ರಾರ್ಥಿಸಿ, ಪ್ಲೇಸ್ಮೆಂಟ್ & ಕೆರಿಯರ್ಗೈಡೆನ್ಸ್ ಸೆಲ್ ನ ಸಂಯೋಜಕಿ ಶ್ರೀಮತಿ ದಿವ್ಯಾಟಿ.ಎಸ್ ಸ್ವಾಗತಿಸಿದರು. ಅಂತಿಮ ವಾಣಿಜ್ಯ ಪದವಿಯ ವಿದ್ಯಾರ್ಥಿಗಳಾದ ವಿಷ್ಣು ಪ್ರಸನ್ನ ವಂದಿಸಿ, ಮುಸ್ತಫ ಕಾರ್ಯಕ್ರಮ ನಿರೂಪಿಸಿದರು.