ಸುಳ್ಯ ಗಾಂಧಿನಗರ ಶಾಲಾ ಪಕ್ಕದ ರಸ್ತೆಯ ಚರಂಡಿಯಲ್ಲಿ ತ್ಯಾಜ್ಯ ತುಂಬಿ ನಾರುತ್ತಿದೆ. ಇದು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡಿದಂತೆ ಭಾಸವಾಗುತ್ತಿದೆ.
ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯದೇ ನಿಂತಿದೆ. ಜತೆಗೆ ಕಸಗಳು ತುಂಬಿಕೊಂಡಿದೆ. ದಿನವಿಡೀ ನೊಣಗಳು ಚರಂಡಿಯಿಂದ ಬಂದರೆ, ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಎದ್ದೇಳುತ್ತವೆ. ಸಾರ್ವಜನಿಕರು ಇದರಿಂದ ನಿರಂತರ ತೊಂದರೆ ಎದುರಿಸುವಂತಾಗಿದೆ. ನಗರ ಪಂಚಾಯತ್ ಗೆ ಮನವಿ ಮಾಡಿಕೊಂಡರೂ ಸಮಸ್ಯೆ ಪರಿಹಾರ ಕಂಡಿಲ್ಲ ಅನ್ನುತ್ತಾರೆ ಸ್ಥಳೀಯರು.
ಸರಕಾರಿ ಶಾಲೆಯ ಕಂಪೌಂಡ್ ನ ಪಕ್ಕದಲ್ಲೇ ರಸ್ತೆಯ ಬದಿ ಈ ರೀತಿ ಚರಂಡಿ ಇರುವುದು ಸರಿಯಲ್ಲ. ನ.ಪಂ.ಗೆ ಕೆಲವು ಸಲ ನಾವು ಸಮಸ್ಯೆ ಹೇಳಿದ್ದರೂ ಪರಿಹಾರವಾಗಿಲ್ಲ. ತುಂಬಾ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಗಾಂಧಿನಗರ ಶಾಲಾಭಿವೃದ್ಧಿ ಸಮಿತಿಯ ಆರ್.ಕೆ. ಮಹಮ್ಮದ್.