ಮರದಲ್ಲಿ ಉಯ್ಯಾಲೆ ಬಿಗಿದು ಬಾಲಕಿ ಮೃತ್ಯು
ಉಯ್ಯಾಲೆಯಾಡುತ್ತಿದ್ದಾಗ ಕುತ್ತಿಗೆಗೆ ಬಿಗಿದು ಬಾಲಕಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಏನೆಕಲ್ಲಿನಲ್ಲಿ ನಡೆದಿದೆ.
ಏನೆಕಲ್ಲು ಗ್ರಾಮದ ಮುತ್ಲಾಜಡ್ಕ ಬಾಬು ಅಜಿಲ ಅವರ ಪುತ್ರಿ ಶೃತಿ ಮೃತ ಬಾಲಕಿ.
ಶೃತಿ 5 ನೇ ತರಗತಿಯಲ್ಲಿ ಓದುತ್ತಿದ್ದು ಇಂದು ಆಕೆ ಶಾಲೆಗೆ ಹೋಗಿರಲಿಲ್ಲ. ಮನೆ ಸಮೀಪದ ಪೇರಳೆ ಮರದಲ್ಲಿ ಸೀರೆಯಲ್ಲಿ ಕಟ್ಟಿದ ಉಯ್ಯಾಲೆಯಾಡುತ್ತಿದ್ದಾಗಈ ದುರ್ಘಟನೆ ಸಂಭವಿಸಿದೆ.
ಬಾಲಕಿಯ ಮೃತದೇಹವನ್ನು ಸುಬ್ರಹ್ಮಣ್ಯ ಆಸ್ಪತ್ರೆಗೆ ಕೊಂಡೊಯ್ದಾಗ ಅಲ್ಲಿ ವೈದ್ಯರು ಇಲ್ಲದ್ದರಿಂದ ಸುಳ್ಯ ಆಸ್ಪತ್ರೆಗೆ ತರಲಾಗಿದೆ ಎಂಬ ಮಾಹಿತಿ ಲಭಿಸಿದೆ