2019-20 ನೇ ಸಾಲಿನ ವಿದ್ಯಾರ್ಥಿ ವೇತನ ವಂಚಿತ ವಿದ್ಯಾರ್ಥಿಗಳ ಗಣತಿ ಮಾಡಿ ವಿದ್ಯಾರ್ಥಿ ಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಎನ್ ಎಸ್ ಯು ಐ ಸುಳ್ಯ ಅಭಿಯಾನ ಕೈಗೊಂಡಿದೆ.
ವಿದ್ಯಾರ್ಥಿ ವೇತನ ದೊರೆಯದ ವಿದ್ಯಾರ್ಥಿಗಳು ಈ ಸರ್ವೆಯಲ್ಲಿ ಭಾಗವಹಿಸಿ ತಮ್ಮ ಮಾಹಿತಿ ಯನ್ನು ನೋಂದಾವಣೆ ಮಾಡಲು ಕೋರಲಾಗಿದೆ.
ಈ ಎಲ್ಲಾ ಮಾಹಿತಿಯನ್ನು ಎನ್ ಎಸ್ ಯು ಐ ಆಯಾ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಅಗ್ರಹಿಸಲಿದೆ.
ಈ ಅಭಿಯಾನವನ್ನು ಝೂಮ್ ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಚಾಲನೆ ನೀಡಿದರು. ಈ ವೇಳೆ ಸುಳ್ಯ NSUI ಮುಖಂಡರುಗಳಾದ ಕೀರ್ತನ್ ಗೌಡ ಕೊಡಪಾಲ, ಆಶಿಕ್ ಅರಂತೋಡ್, ಆಸಿಫ್ ಬಾಳಿಲ , ಧನುಷ್ ಕುಕ್ಕೆಟ್ಟಿ, ದರ್ಶನ್ , ರಕ್ಷಿತ್ , ಶಹಾಲ್, ಯಶವಂತ್ ,ಪವನ ಅಂಬೆಕಲ್ಲ್, ಭರತ್ ಅಡ್ಯಡ್ಕ ,ಸುಜಿತ್ , ಮಿಥುನ್ ಸುಳ್ಯ , ಮೋಹನ್ ಹಾಗು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
♦️ *ವಿದ್ಯಾರ್ಥಿ ಹಾಗೂ ಪೋಷಕರು ಗಮನಿಸಿ.
*https://forms.gle/5aaa9bH7H1mMZFBfA*
*👆👆👆ಇಲ್ಲಿ ನಿಮ್ಮ ಮಾಹಿತಿ ನಮೂದಿಸಿ*
*ಯಾರೆಲ್ಲ ಭಾಗವಹಿಸಬಹುದು.* *??*
1ನೇ ತರಗತಿಯಿಂದ ಮಾಸ್ಟರ್ ಪದವಿ ವಿದ್ಯಾರ್ಥಿ ಗಳ ನಡುವೆ ಎಲ್ಲಾ ವಿದ್ಯಾರ್ಥಿ ಗಳು ಭಾಗವಹಿಸಬಹುದು.
1)ಕಳೆದ ವರ್ಷ ದ ವಿದ್ಯಾರ್ಥಿ ವೇತನ ಬರದ ವಿದ್ಯಾರ್ಥಿ ಗಳು
2) ಪೂರ್ಣ ಮೊತ್ತ ಬರದ ವಿದ್ಯಾರ್ಥಿ ಗಳು
3) ಅರಿವು ಲೋನ್ ಬರದ ವಿದ್ಯಾರ್ಥಿ ಗಳು
ಹೀಗೆ ಎಲ್ಲಾ ವಿದ್ಯಾರ್ಥಿ ಗಳು ಭಾಗವಹಿಸಬಹುದು. ಹಾಗೂ ಸುಳ್ಯ ಮತ್ತು ಕಡಬ ತಾಲೂಕಿನ ಶಿಕ್ಷಣ ಸಂಸ್ಥೆ ಅಥವಾ ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿ ಗಳು ಭಾಗವಹಿಸಬಹುದು.