ಬಡ್ಡಡ್ಕ- ಕಲ್ಲಪಳ್ಳಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವ, ಪ್ರವೇಶ ದ್ವಾರದ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಬಡ್ಡಡ್ಕ – ಕಲ್ಲಪಳ್ಳಿ ಶ್ರಿ ಅಯ್ಯಪ್ಪ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವವು ಬ್ರಹ್ಮಶ್ರೀ ವೇ| ಕುಂಟಾರು ವಾಸುದೇವ ತಂತ್ರಿವರ್ಯರ ನೇತೃತ್ವದಲ್ಲಿ ಮಾ.5 ರಂದು ಆರಂಭಗೊಂಡಿತು. ಮಾ.5 ರಂದು ಸಂಜೆ ಮಂದಿರದ ನೂತನ ಪ್ರವೇಶ ದ್ವಾರದ ಉದ್ಘಾಟನೆಯನ್ನು ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಕಡಂಬಳಿತ್ತಾಯ ರವರು ನೆರವೇರಿಸಿದರು. ಬಳಿಕ ನೂತನ ಭಜನಾ ಮಂದಿರ ಮತ್ತು ಉಗ್ರಾಣದ ಕುತ್ತಿಪೂಜೆಯು ವಿಶ್ವಕರ್ಮ ಅಪ್ಪಯ್ಯ ಆಚಾರ್ಯ ಕುಕ್ಕುಜಡ್ಕ ರವರ ನೇತೃತ್ವದಲ್ಲಿ ನಡೆಯಿತು. ರಾತ್ರಿ ಅಯ್ಯಪ್ಪ ಸೇವಾ ಸಮಿತಿ ಗೌರವಾಧ್ಯಕ್ಷೆ ಶ್ರೀಮತಿ ಎನ್. ವೇದಾವತಿ ಅನಂತ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರಗತಿಪರ ಕೃಷಿಕ ಎಸ್ .ಎನ್. ಜಯರಾಮ ಪಿಂಡಿಬನ ದೀಪ ಬೆಳಗಿಸಿದರು. ಅತಿಥಿಗಳಾಗಿ ಪನತ್ತಡಿ ಪಂ.ಸದಸ್ಯ ಎ.ರಾಧಾಕೃಷ್ಣ ಕಲ್ಲಪಳ್ಳಿ, ಆಲೆಟ್ಟಿ ಪಂಚಾಯತ್ ಸದಸ್ಯರಾದ ಸತ್ಯ ಕುಮಾರ್ ಆಡಿಂಜ, ಸಾಂತಪ್ಪ ಪಿಂಡಿಬನ, ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ನಾಗಪಟ್ಟಣ ಸದಾಶಿವ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ನಾರ್ಕೋಡು, ಬಡ್ಡಡ್ಕ ರಾ.ಅ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ, ಅಯ್ಯಪ್ಪ ಸೇವಾ ಸಮಿತಿ ಉಪಾಧ್ಯಕ್ಷ ವಿಶ್ವನಾಥ ಪೆರುಮುಂಡ, ಬಡ್ಡಡ್ಕ ಶ್ರೀ. ಧ.ಗ್ರಾ.ಯೋಜನೆ ಒಕ್ಕೂಟದ ಅಧ್ಯಕ್ಷ ಲೋಕಯ್ಯ ಗೂಡಿಂಜ ಉಪಸ್ಥಿತರಿದ್ದರು. ಜಯಪ್ರಕಾಶ ಪೆರುಮುಂಡ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಕೆ.ಬಾಲಚಂದ್ರ ರವರು ಸ್ವಾಗತಿಸಿದರು. ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಕೆ.ಜೆ.ಹರೀಶ ವಂದಿಸಿದರು.ಶಿವಾನಂದ ರಂಗತ್ತಮಲೆ ಮತ್ತು ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ “ಗೀತಾ ಸಾಹಿತ್ಯ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.