ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಜನ ಜೌಷಧಿ ಸಪ್ತಾಹದ ಪ್ರಯುಕ್ತ ಮಾ.6 ರಂದು ಮುಂಜಾನೆ ಬೈಕ್ ರ್ಯಾಲಿ ನಡೆಯಿತು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ “ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ”ದಿಂದ ಪಂಜ ಪೇಟೆ ಮೂಲಕ ಪಲ್ಲೋಡಿ ,ಕೃಷ್ಣನಗರ ತನಕ ರ್ಯಾಲಿ ಜರುಗಿತು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಉಪಾಧ್ಯಕ್ಷ ಲಿಗೋಧರ ಆಚಾರ್ಯ ನಾಯರ್ ಕೆರೆ, ಆಡಳಿತ ನಿರ್ದೇಶಕ ಚಿನ್ನಪ್ಪಗೌಡ ಚೊಟ್ಟೆಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ, ಸಂಘದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಜನ ಔಷಧಿ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ದೇಶದಾದ್ಯಂತ ಸಪ್ತಾಹ ನಡೆಯುತ್ತಿದೆ.