ಸಂಸ್ಥೆಯ ಸ್ಥಾಪಕ ಡಾ.ಚಂದ್ರಶೇಖರ ದಾಮ್ಲೆಯವರಿಗೆ ಅಭಿನಂದನೆ
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮ – ಮತ್ತು ಸಂಸ್ಥೆಯ ಸ್ಥಾಪಕ ಡಾ.ಚಂದ್ರಶೇಖರ ದಾಮ್ಲೆಯವರಿಗೆ ಅಭಿನಂದನಾ ಸಮಾರಂಭ ಸ್ನೇಹಯಾನ ಇಂದು ನಡೆಯಿತು.
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬೆಳ್ಳಿಹಬ್ಬ ಸಂಚಿಕೆ ಬಿಡುಗಡೆಗೊಳಿಸಿದರು. ಮೀನುಗಾರಿಕೆ, ಬಂದರು ಸಚಿವ ಎಸ್.ಅಂಗಾರ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಡಾ.ಚಂದ್ರಶೇಖರ ದಾಮ್ಲೆ ದಂಪತಿಗಳನ್ನು ಸನ್ಮಾನಿಸಿದರು.
ಸ್ನೇಹಯಾನ ಅಭಿನಂದನಾ ಗ್ರಂಥ ವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಬಿಡುಗಡೆಗೊಳಿಸಿದರು.
ಚಂದ್ರಶೇಖರ ದಾಮ್ಲೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ
ಬಾಲಚಂದ್ರ ಗೌಡ ಅಧ್ಯಕ್ಷತೆ ವಹಿಸಿದ್ದರು.
ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಡಿ.ಡಿ.ಪಿ.ಐ. ಮಲ್ಲೇಸ್ವಾಮಿ ವೇದಿಕೆಯಲ್ಲಿ ದ್ದರು.
ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಪಿ.ಬಿ.ಸುಧಾಕರ ರೈ ಸ್ವಾಗತಿಸಿದರು.