ಬೆಳ್ಳಾರೆ ಗ್ರಾಮದ ಗಟ್ಟಿಗಾರು ಮನೆಯಲ್ಲಿ ಹರಕೆಯ ಒತ್ತೆಕೋಲ ಮತ್ತು ಧರ್ಮದೈವ ವರ್ಣಾರ ಪಂಜುರ್ಲಿ, ಚಾಮುಂಡಿ ,ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಕೋಲವು ಮಾ.6 ಮತ್ತು ಮಾ.7 ರಂದು ನಡೆಯಿತು.
ಮಾ.6 ರಂದು ಸಂಜೆ ಗಂಟೆ 5.00 ಕ್ಕೆ ಕಲ್ಲಪಣೆ ದೈವಸ್ಥಾನದಿಂದ ಭಂಡಾರ ತರಲಾಯಿತು.
ರಾತ್ರಿ ಮೇಲೇರಿಗೆ ಬೆಂಕಿ ಕೊಡಲಾಯಿತು.ನಂತರ ಕಲ್ಲುರ್ಟಿ ದೈವದ ಕೋಲ ನಡೆಯಿತು ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಗಂಟೆ 11.00 ಕ್ಕೆ ಕುಳಿಚ್ಚಾಟು ನಡೆಯಿತು.
ಮಾ.7 ರಂದು ಬೆಳಿಗ್ಗೆ ಗಂಟೆ 1.00 ಕ್ಕೆ ಮೊಡ ಚಾಮುಂಡಿ ಮತ್ತು ಪಡಿಂಞಾರ್ ಚಾಮುಂಡಿ ದೈವಗಳ ಕೋಲ ನಡೆಯಿತು.
ಬೆಳಿಗ್ಗೆ ಚಾಮುಂಡಿ ಗುಳಿಗ ಮತ್ತು ಪರ್ದಾಳಿ ಗುಳಿಗ ದೈವಗಳ ಕೋಲ ನಡೆಯಿತು.
ಬೆಳಿಗ್ಗೆ ಗಂಟೆ 4.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು.
ನಂತರ ಧರ್ಮದೈವ ವರ್ಣಾರ ಪಂಜುರ್ಲಿ ದೈವದ ಕೋಲ ನಡೆಯಿತು.
ಬಳಿಕ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಬಾಬು ಹೆಗ್ಡೆ ಮತ್ತು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.