ಪಂಜ: ಲಯನ್ಸ್ ಕ್ಲಬ್ ವತಿಯಿಂದ ಗ್ರಾಮ ಪಂಚಾಯತ್ ಗೆ ಶವ ಸಂಸ್ಕಾರ ಪೆಟ್ಟಿಗೆ ಹಸ್ತಾಂತರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪಂಜ ಲಯನ್ಸ್ ಕ್ಲಬ್ ವತಿಯಿಂದ ಪಂಜ ಗ್ರಾಮ ಪಂಚಾಯತ್ ಗೆ ವಿಶೇಷ ತಂತ್ರಜ್ಞಾನದ ಶವ ಸಂಸ್ಕಾರದ ಪೆಟ್ಟಿಗೆ ಹಸ್ತಾಂತರ ಮಾ.2 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ ಕೆ ಎಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಲಯನ್ಸ್ ಜಿಲ್ಲಾ ಗವರ್ನರ್ ಡಾ. ಗೀತ ಪ್ರಕಾಶ್ ಹಸ್ತಾಂತರಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ ರವರು ಸ್ವೀಕರಿಸಿದರು.
, ಗವರ್ನರ್ ವಸಂತ ಕುಮಾರ್ ಶೆಟ್ಟಿ, ಪ್ರಾಂತ್ಯ 1ರ ಪ್ರಾಂತ್ಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವಲಯ ಸಲಹೆಗಾರ ಧರಣೇಂದ್ರ ಜೈನ್, ಸಾರ್ವಜನಿಕ ಸಂಪರ್ಕಾಧಿಕಾರಿ ಮಂಗೇಶ್ ಭಟ್, ಪ್ರಾಂತೀಯ ಸಲಹೆಗಾರ ಮಾಧವ ಗೌಡ ಜಾಕೆ, ಜಿಲ್ಲಾ ಗವರ್ನರ್ ರವರ ಪತ್ನಿ ಡಾ.ಗಾಯತ್ರಿ ಜಿ ಪ್ರಕಾಶ್ ಹಾಗೂ ಪಂಜ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕ, ಕಾರ್ಯದರ್ಶಿ ಕುಸುಮಾಧರ ಕೆಮ್ಮೂರು, ಖಜಾಂಜಿ ಕರುಣಾಕರ ಎಣ್ಣೆಮಜಲು ಮೊದಲಾದವರು ಉಪಸ್ಥಿತರಿದ್ದರು.ಲಯನ್ಸ್ ಕ್ಲಬ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.
ವಿಶೇಷತೆ : ಶವಸಂಸ್ಕಾರದ ಪೆಟ್ಟಿಗೆ ಇಡಲು ಕಡಿಮೆ ಸ್ಥಳ ಸಾಕಾಗುತ್ತದೆ. ಗೆರಟೆ, ಕಟ್ಟಿಗೆ ಕಡಿಮೆ ಸಾಕಾಗುತ್ತದೆ. ಸುಮಾರು 5 ತಾಸಿನ ಒಳಗೆ ಸಂಪೂರ್ಣ ಬಸ್ಮ ವಾಗುತ್ತದೆ. ವಿಶೇಷ ತಂತ್ರಜ್ಞಾನದಿಂದ ಪೆಟ್ಟಿಗೆ ನಿರ್ಮಿಸಲಾಗಿದ್ದು ಸುಮಾರು 48500 ರೂ ವೆಚ್ಚವಾಗಿದೆ. ಶವ ಸಂಸ್ಕಾರ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅಗತ್ಯವಿದ್ದಲ್ಲಿ ಸ್ಮಶಾನಕ್ಕೆ ಅಥವಾ ಸ್ವಂತ ಜಾಗಕ್ಕೂ ಉಚಿತವಾಗಿ ನೀಡಲಾಗುವುದು. ಎಂದು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.