ಇಂದು ಅಂತರಾಷ್ಟ್ರೀಯ ಮಹಿಳಾ ದಿನ

Advt_Headding_Middle

 

ಆಶಯ ಅರಿತು ಆಚರಿಸೋಣ

–  ಲತಾಶ್ರೀ ಸುಪ್ರೀತ್ ಮೋಂಟಡ್ಕ

ಅಂತರಾಷ್ಟ್ರೀಯ ಮಹಿಳಾ ದಿನ ಅಥವಾ ವಿಶ್ವ ಮಹಿಳೆಯರ ದಿನ. ಕಳೆದೊಂದು
ಶತಮಾನದಿಂದ ಪ್ರತಿವರ್ಷ ಈ ದಿನವನ್ನು ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಗಾಗಿ ಆಚರಣೆ ಮಾಡಲಾಗುತ್ತದೆ. ಆದರೆ, ಇಂದು ಮಹಿಳೆಯರಿಗೆ ಸಮಾನತೆ ಸಿಕ್ಕಿದೆಯೇ? ಮಹಿಳಾಪರ ಬದಲಾವಣೆಯ ಹಾದಿಯನ್ನು ರೂಪಿಸುವಲ್ಲಿ ನಮ್ಮ ಸಮಾಜ, ನಮ್ಮ ಜಗತ್ತು ಮತ್ತು ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆಯೇ? ಕೇವಲ ಮಾರ್ಚ್ ತಿಂಗಳು ಬಂದಾಗ ಮಾತ್ರ ಮಹಿಳೆಯರ ಬಗೆಗೆ ವಿಶೇ? ಕಾಳಜಿ, ಪ್ಯಾಕೇಜ್, ಘೋಷಣೆ, ರಕ್ಷಣೆ ಮುಂತಾದ ಕೂಗುಗಳು ಧ್ವನಿ ಗೂಡುತ್ತದೆ. ಕ್ರಮೇಣ ಅದು ಕಾಲನ ಚಕ್ರಕ್ಕೆ ಸಿಲುಕಿ ಮಾಯವಾಗುತ್ತಿದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ
ಸಾಧನೆಗಳನ್ನು ನೆನೆಯಲಾಗುತ್ತದೆ, ಆದರೆ ಅದು ಅಂದಿನ ದಿನಕ್ಕೆ (ಮಾರ್ಚ್ ತಿಂಗಳಿಗೆ) ಮಾತ್ರ ಸೀಮಿತವಾಗಿರದೇ ಪ್ರತಿದಿನವೂ ಪ್ರತಿಕ್ಷಣವೂ ಮಹಿಳೆಯರನ್ನು ನಾವು-ನೀವು ನೆನೆಯುವಂತಾಗಬೇಕು.
ಹಾಗಾದಾಗ ಮಾತ್ರ ನಾವು ನಮ್ಮ ಸಮಾಜದಲ್ಲಿ ಸ್ತ್ರಿಯರನ್ನು ಗೌರವಿಸಲು ಸಾಧ್ಯ.

ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದುತ್ತಿರುವ ಸ್ತ್ರೀ ಸಮೂಹ ಇಂದು ತನ್ನ ಶಕ್ತಿ ಏನು
ಎಂಬುದನ್ನು ಸಮಾಜಕ್ಕೆ ತಿಳಿಸಿಕೊಡಬೇಕಾಗಿದೆ. ಸುಮಾರು ನೂರಮೂರು ವರ್ಷಗಳ ಹಿಂದೆ ಅಂದರೆ 1910 ರ ಆಗಸ್ಟ್ 27 ರಂದು ಕ್ರಾಂತಿಕಾರಿ ನಾಯಕರಾದ ಕ್ಲಾರಾ ಜೆಟ್ಕಿನ್ ಅವರ ಸಂಗಾತಿಗಳಾದ ಅಲೆಕ್ಸಾಂಡ್ರಿಯಾ ಕೊಲಾಂಥೈ ಮತ್ತು ಇತರರೊಂದಿಗೆ ಕೊಪನ್ಹೇಗನ್ನಲ್ಲಿ ಸಂಘಟಿಸಿದ್ದ ಅಂತಾರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುವ ಕುರಿತ ನಿರ್ಣಯ ಮಾಡಿದರು. ಆ ನಂತರ ಅಮೇರಿಕದಲ್ಲಿ ಸಮಾಜವಾದಿ ಮಹಿಳೆಯರು ೧೯೦೮ರಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಮೊಟ್ಟ ಮೊದಲು ಆಚರಿಸಿದರು. ತದನಂತರದ ಆ ದಿನವನ್ನು ಮಹಿಳಾ ದಿನಾಚರಣೆಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ ದಿನ ಕಳೆದಂತೆ ಅಂತರಾಷ್ಟ್ರೀಯ ಮಹಿಳಾ ದಿನ ಬೆಳವಣಿಗೆಯ  ಪ್ರತಿಬಿಂಬದ ಜೊತೆಗೆ ಸಾಧಾರಣ ಮಹಿಳೆಯ ಧೀರತನ, ದೃಢತೆ, ಸಮುದಾಯದ ಇತಿಹಾಸದಲ್ಲಿ ವಹಿಸಿದ
ಅಸಾಧಾರಣ ಪಾತ್ರವನ್ನು ಬಿಂಬಿಸುತ್ತಾ ಬದಲಾವಣೆಯ ಕರೆಯನ್ನು ನೀಡಿ ಮಹಿಳೆಯರ ಉನ್ನತಿಗೆ ದಾರಿದೀಪವಾಗಬೇಕಿತ್ತು. ಆದರೆ ಅದು ಇಂದು ಕೇವಲ ತೋರಿಕೆಗೆ ಮಾತ್ರ ಸಮಾಜದಲ್ಲಿ ತಲೆಏತ್ತಿದೆ.
ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿಯೂ ಅವಳಲ್ಲಿ ವಿಶಿಷ್ಟವಾದ ಶಕ್ತಿ ಅಡಗಿದೆ ಎಂದರ್ಥವಲ್ಲವೇ?

ಮಾತೃ ಶಕ್ತಿ, ಪ್ರೀತಿ ? ವಾತ್ಸಲ್ಯ, ಶಾಂತಿ-ಸಹನೆ, ಆರಿಕೆ- ಆರೈಕೆ, ಸತ್ಕಾರ – ಸನ್ಮಾನ, ಸಾಂತ್ವಾನ ? ತಾಳ್ಮೆ, ಮುಂತಾದ ಗುಣಗಳನ್ನು ಆಕೆ ಹುಟ್ಟಿನಿಂದಲ್ಲೇ
ಮೈಗೂಡಿಸಿಕೊಂಡು ಬಂದಿರುತ್ತಾಳೆ. ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತ ಪದದಿಂದ ಬಂದಿದ್ದು, ಕನ್ನಡದಲ್ಲಿ ಹೆಣ್ಣು ಎಂಬ ಅರ್ಥವಿದೆ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ , ಸ್ಥಾನಮಾನವಿದೆ. ಮಾನವರಲ್ಲಿ ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ
ನಿರ್ಧರವಾಗುತ್ತದೆ. ಸಮಾಜದಲ್ಲಿ ಇರುವ ಕಟ್ಟುಕಟ್ಟಲೆ, ರೀತಿ ರಿವಾಜುಗಳು ಆಕೆಯ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಿ ಆಕೆಯ ಸ್ಥಾನಮಾನಗಳನ್ನು ತಿರುಗಿ ನೊಡುವಂತೆ ಆಗಿದೆ. ಸಂಸಾರ, ಕೌಂಟುಬಿಕ ಪದ್ಧತಿ, ಸಂಸ್ಕೃತಿ -ಸಂಸ್ಕಾರ, ಕುಟುಂಬ ನಿರ್ವಹಣೆ, ಮಕ್ಕಳ ಆರೈಕೆ ಹೀಗೆ ಎಲ್ಲಾ ಜವಾಬ್ದಾರಿಗಳನ್ನು ತನ್ನ
ಹೆಗಲ ಮೇಲೆ ಹೇರಿರುವ ಆಕೆಗೆ ಮನೆಯ ಕಟ್ಟುಪಾಡುಗಳು, ಹಬ್ಬ ಹರಿದಿನ, ಇವುಗಳೊಡನೆ ಬಹಳ ನಾಜೂಕಾಗಿ ಜವಾಬ್ದಾರಿ ನಿಭಾಯಿಸಿಕೊಂಡು ತನ್ನ ಕುಟುಂಬವನ್ನು ತನ್ನಲಿರುವ ಕೌಶಲ್ಯಗಳಿಂದ ತನ್ನ ಮನೆಯ ನಿರ್ವಹಣೆಯಲ್ಲಿ ತೋರಿಸುತ್ತಾಳೆ. ನಿತ್ಯ ಕಿವಿಗೆ ಅಪ್ಪಳಿಸುವ ಕೌಟುಂಬಿಕ ಹಿಂಸೆ, ತಾರತಮ್ಯ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಸ್ತ್ರೀ ಶಕ್ತಿ ಸಬಲೀಕರಣ ಇಂದು ಸ್ತ್ರೀಯರನ್ನು ಎತ್ತ ಕರೆದೊಯ್ಯುತ್ತಿದೆ? ಸಮಾಜದಲ್ಲಿ ಆಕೆಗೆ ಸಿಗುವ ಸ್ಥಾನಮಾನವಾದರೂ ಏನು? ಹೆಣ್ಣು -ಹೆಣ್ಣೆಂಬ ಹಣೆ ಪಟ್ಟಿಯನ್ನು ಕೊಟ್ಟು
ಆಕೆಯನ್ನು ಕೆಲವೊಂದು ಕ್ಷೇತ್ರಗಳಲ್ಲಿ ಯಾಕಾದರೂ ಬೇರ್ಪಡಿಸಲಾಗುತ್ತದೆ? ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲ ಈಗ ಕಣ್ಮರೆಯಾಗಿ ಪುರು? ಪ್ರಧಾನ ಸಮಾಜದಲ್ಲಿ ಪುರು?ರ? ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಅದೇ? ಮಹಿಳಾಮಣಿಗಳು ನಮ್ಮಲ್ಲಿ ತೋರಿಸಿಕೊಟ್ಟಿದ್ದಾರೆ.
ಆದರೆ ಇಂದು ಕಾಲ ಬದಲಾಗಿದೆ. ಕೂಡು ಕುಟುಂಬ ಪದ್ಧತಿ ಹೂಳಾಗಿದೆ. ಗಂಡ ಮಕ್ಕಳು ತಾನು ಎಂದಾಗಿದೆ. ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಗೋಸ್ಕರ ತಾನೇ ಸಮಾಜದಲ್ಲಿ ದುಡಿದು ಸಂಸಾರವೆಂಬ ನೊಗಕ್ಕೆ ಹೆಗಲು ಕೊಡುವ ಹೆಣ್ಣುಮಕ್ಕಳು ಇದ್ಡಾರೆ. ಮಾತ್ರವಲ್ಲದೇ ಆಧುನಿಕ ಸ್ತ್ರೀಯರಲ್ಲಿ ಕೆಲವರು ಅಶಾಂತಿ, ಅಶಿಸ್ತು, ಅಜಾಗರೂಕ ನಡವಳಿಕೆಯಿಂದ ಇಡೀ ಸಮಾಜದೊಳಗಿನ ಶಿಸ್ತು, ಕಟ್ಟುಪಾಡುಗಳು,
ಕಾನೂನುಗಳನ್ನು ಮುರಿಯುತ್ತಿದ್ದಾರೆ. ಅತೃಪ್ತಿ ಅವರ ಮನಸ್ಸನ್ನು ಹೊಕ್ಕು ವ್ಯವಸ್ಥೆಯನ್ನು ಹಾಳುಗೆಡವಿ,ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ವಾಲುತ್ತಿರುವುದನ್ನು ಕಾಣುತ್ತೇವೆ. ಸ್ರೀ ಸಮಾನತೆ ಎಂಬ ಹೆಸರಿನಲ್ಲಿ ಸ್ವೇಚ್ಚಾಚಾರಿಗಳಾಗಿ ತಾವು ಗಂಡಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬಂತೆ. ಮದ್ಯಪಾನ,
ಧೂಮಪಾನ ಮಾಡುತ್ತಾ ಅರೆಬಟ್ಟೆಗಳನ್ನು ತೊಟ್ಟು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಾ, ಕಾನೂನನ್ನು ದುರುಪಯೋಗ ಮಾಡಿಕೊಂಡು ಗುಂಡಾಗಿರಿ ಮಾಡಿಕೊಂಡು ಇಂದು ಮದುವೆ ನಾಳೆ ಡೈವೋರ್ಸ್ ಎಂಬಂತೆ, ತಾಳ್ಮೆ, ಸಂಯಮ ಇಲ್ಲದೇ ಅಹಂ, ದರ್ಪ, ದೌಲತ್ತನ್ನು ಪ್ರದರ್ಶಿಸುತ್ತಾ, ನಮ್ಮ ಸಮಾಜವನ್ನು
ಕದಡುವ ಮಹಿಳಾಮಣಿಗಳು ನಮ್ಮ ನಡುವೆ ಇದ್ದಾರೆ ಎಂದು ಹೇಳಲು ನಾಚಿಕೆಯಾಗುತ್ತದೆ.
ಶಿಕ್ಷಣ, ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ, ಸಾಮಾಜಿಕ, ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರು?ರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿರುವ ಮಹಿಳೆಯರು ನಮ್ಮ ಮುಂದಿದ್ದಾರೆ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ಮಾನಭಂಗ, ದೌರ್ಜನ್ಯ, ಭ್ರೂಣ
ಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಹಿಂಸೆ, ಕೊಲೆ, ಸುಲಿಗೆ ಗಳನ್ನು ದಿನನಿತ್ಯ ವಾಹಿನಿಗಳಲ್ಲಿ ಕಂಡು ಕೇಳುವಾಗ ಈ ರೀತಿಯ ಮಹಿಳಾ ದಿನಾಚರಣೆಯ ಆಚರಣೆಗೆ ನಿಜವಾದ ಅರ್ಥವಿದೆಯೇ ಎಂದು ನನಗನಿಸುತ್ತದೆ. ಇದು ಕೇವಲ ತೋರಿಕೆಗೆ ಬರೀ ಕ್ಯಾಲೆಂಡರ್, ಸಮಾರಂಭಕ್ಕಾಗಿ ಕಣ್ಣುಗಟ್ಟಿಗೆ ನಡೆಸುವ
ಆಚರಣೆ ಆಗಿದೆ ಎಂದರೆ ತಪ್ಪಾಗಲಾರದು. ಆಧುನಿಕ ಮಹಿಳೆ ಎಂಬ ಹಣೆಪಟ್ಟಿ ಇಂದಿನ ಮಹಿಳೆಯರಿಗೆ ಲಭಿಸಿದೆ ನಿಜ. ಆದರೆ, ಅದರ ಹಿಂದೆ ಆಕೆ ಅದೆ? ನೋವು, ಕ?, ದುಃಖಗಳನ್ನು ಅನುಭವಿಸುತ್ತಿದ್ದಾಳೆ ಎಂಬುದು ಯಾರಿಗೂ ಅರಿವಿಲ್ಲ. ಪ್ರೀತಿ, ವಾತ್ಸಲ್ಯ, ಕರುಣೆ, ಕನಿಕರ ಎಲ್ಲಾದಕ್ಕೂ ಸದಾ ಸ್ತ್ರೀ ಕುಲವೇ
ಮುಂದು.
ಜಗತ್ತಿನ ಎಲ್ಲಾ ಜಿವರಾಶಿಗಳಿಗೆ ಜನ್ಮ ಕೋಡುವವಳು ಸ್ತ್ರೀ. ಆಕೆ ನಿತ್ಯ ನಿರಂತರ ಕಾಯಕಯೋಗಿ. ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ನಾದಿನಿಯಾಗಿ ಅತ್ತೆಯಾಗಿ ಹೀಗೆ ಪ್ರತಿಯೊಂದು ಹುದ್ದೆಯನ್ನು ನಿರ್ವಹಿಸುವ ಈಕೆ ದಣಿವರಿಯದ ನಾಯಕಿ ಎಂದರೆ ತಪ್ಪಾಗಲಾರದು. ಇಂತಹ
ಹೆಣ್ಣಿನ ಮಹತ್ವ ಈ ದೇಶದ ಎಷ್ಟು ಜನಕ್ಕೆ ಗೊತ್ತಿಲ್ಲ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮೂರು ಜನ ತಾಯಂದಿರನ್ನು ನೋಡಿರುತ್ತಾನೆ. ಹೆತ್ತು ಹೊತ್ತು ಸಾಕಿ ಸಲಹಿದ ತಾಯಿ ಮೊದಲನೆಯವಳಾದರೆ, ಕಷ್ಟ- ಸುಖ, ನೋವು-ನಲಿವು, ಪ್ರೀತಿ-ಕಾಳಜಿಯನ್ನು ಜೊತೆಯಾಗಿ ಹಂಚಿಕೊಂಡ ಅರ್ಧಾಂಗಿನಿಯಾಗಿ ಬರೋ
ಹೆಂಡತಿ ಎರಡನೆಯ ತಾಯಿಯಾದರೆ, ಜನ್ಮಕೊಟ್ಟ ಗಂಡುಮಕ್ಕಳು ಕೊನೆಕಾಲದಲ್ಲಿ ಬೀದಿಗೆ ತಳ್ಳಿದಾಗ ಆ ಕಡೆಕಾಲದಲ್ಲಿ ಮಗಳ ಸ್ಥಾನದಲ್ಲಿ ಆಶ್ರಯ ಕೊಡುವವಳು ಮೂರನೆಯ ತಾಯಿಯಾಗಿರುತ್ತಾಳೆ.

ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ,
ಸುಳ್ಯ
ಕೆ.ವಿ.ಜಿ ಆಯುರ್ವೇದ ವೈಧ್ಯಕೀಯ ಕಾಲೇಜು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.