ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆಗೆ ಹಳೆ ವಿದ್ಯಾರ್ಥಿಗಳಾದ ಪುಷ್ಪರಾಜ್ ಶೆಟ್ಟಿ ಹೊಸಮನೆ ಮತ್ತು ಸರೋಜ ತಾರನಾಥ್ ಶೆಟ್ಟಿ ಸುರತ್ಕಲ್ ನೇತೃತ್ವದಲ್ಲಿ ಸುಮಾರು 4 ಲಕ್ಷ ರೂ. ಮೌಲ್ಯದ ಶಾಲಾ ಪೀಠೋಪಕರಣಗಳನ್ನು ಒದಗಿಸಲಾಗಿದೆ.
ಎಲ್ಲಾ ಪೀಠೋಪಕರಣಗಳನ್ನು ಎಮ್.ಎಮ್.ಸಿ, ಹಾರ್ಡ್ಮೆಟಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಇವರು ಸೇವಾರ್ಥ ಕೊಡುಗೆಯಾಗಿ ನೀಡಿದ್ದಾರೆ.
ಹಾಗೆಯೇ ಶಿವ ಪ್ರೆಶೆಷನ್ ಪ್ರಾಬ್ರಿಕೇಟರ್ಸ್ ಬೆಂಗಳೂರು ಇವರು ಗ್ರೀನ್ ಬೋರ್ಡ್ನ್ನ ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತಾ ಕುಮಾರಿ, ಶಿಕ್ಷಕಿಯರಾದ ರತ್ನಾವತಿ ಬಿ, ಶೃತಿ, ಗೌರವ ಶಿಕ್ಷಕಿ ಅಶ್ವಿತಾ ಕೆ.ಎಲ್ ಹಾಗೂ ಗ್ರಾ.ಪಂ.ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಗಣೇಶ್ ಅರ್ನಾಡಿ ಉಪಸ್ಥಿತರಿದ್ದರು.