ಬಡ್ಡಡ್ಕದಲ್ಲಿ ನಿರ್ಮಾಣಗೊಂಡ ಅಯ್ಯಪ್ಪ ಭಜನಾ ಮಂದಿರದ ಪುನ:ಪ್ರತಿಷ್ಠೆ ನೂತನ ಉಗ್ರಾಣ, ಪಾಕಶಾಲೆ, ಕಾಣಿಕೆ ಹುಂಡಿ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಬಡ್ಡಡ್ಕ-ಕಲ್ಲಪಳ್ಳಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನ:ಪ್ರತಿಷ್ಠಾ ಕಾರ್ಯಕ್ರಮ ಮಾ. 7ರಂದು ಜರುಗಿತು. ಬಹ್ಮಶ್ರೀ ವೇ.ಕುಂಟಾರು ವಾಸುದೇವ ತಂತ್ರಿವರ್ಯರ ನೇತೃತ್ವದಲ್ಲಿ ಪೂರ್ವಾಹ್ನ ಗಂಟೆ 6.45 ರಿಂದ 7.10 ರ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಆಯ್ಯಪ್ಪ ಸ್ವಾಮಿ, ಮಹಾಗಣಪತಿ,ದುರ್ಗಾ ದೇವಿಯ ಬೆಳ್ಳಿಯ ಉಬ್ಬು ಭಾವಚಿತ್ರದ ಪ್ರತಿಷ್ಠೆಯು ಜರುಗಿತು. ಈ ಸಂದರ್ಭದಲ್ಲಿ ಸ್ಥಳೀಯ ಭಜಕರಿಂದ ಭಜನಾ ಸೇವೆ ನಡೆಯಿತು. ಮಂದಿರದ ನೂತನ ಉಗ್ರಾಣ ಮತ್ತು ಪಾಕ ಶಾಲೆಯ ಉದ್ಘಾಟನೆಯನ್ನು ವಿಠಲ ನಾಯ್ಕ್ ದೋಣಿಮೂಲೆ ನೆರವೇರಿಸಿದರು. ಮಂದಿರಕ್ಕೆ ನೂತನ ಕಾಣಿಕೆ ಹುಂಡಿಯನ್ನು ಅಯ್ಯಪ್ಪ ಸೇವಾ ಸಮಿತಿ ಗೌರವಾಧ್ಯಕ್ಷೆ ಎನ್. ವೇದಾವತಿ ಅನಂತ ರವರು ಸಮರ್ಪಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಕೆ.ಬಾಲಚಂದ್ರ,ಅಧ್ಯಕ್ಷ ಕೆ.ಜೆ.ಹರೀಶ ರಂಗತ್ತಮಲೆ, ಕಾರ್ಯದರ್ಶಿ ಕೆ.ಕಮಲಾಕ್ಷ,ಎಂ.ಗಂಗಾಧರ ಪತ್ತುಕುಂಜ, ಕೋಶಾಧಿಕಾರಿ ಗಿರಿಯಪ್ಪ ನಾಯ್ಕ್, ಕೆ.ವಿ. ಪ್ರಕಾಶ್, ಗುರುಸ್ವಾಮಿ ಜನಾರ್ಧನ ಗುಂಡ್ಯ ಕಲ್ಲಪಳ್ಳಿ ಹಾಗೂ ಉಪಸಮಿತಿಯ ಸಂಚಾಲಕರು, ಸದಸ್ಯರು, ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.

 

ಧಾರ್ಮಿಕ ಸಭೆ

ಸಂಸ್ಕೃತಿ, ಸಂಸ್ಕಾರವನ್ನು ರಫ್ತು ಮಾಡುವ ತಾಕತ್ತು ಹೊಂದಿರುವ ಏಕೈಕ ದೇಶ ಭಾರತ -ಕುಂಟಾರು ರವೀಶ ತಂತ್ರಿ

ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ಧರ್ಮಕ್ಕೆ ಘಾಸಿ ಮಾಡಲು ಹೊರಟವರಿಗೆ ಸ್ವಾಮಿಯ ಶಕ್ತಿಯ ಗೋಚರವಾಗಿದೆ. ಧರ್ಮದ ಮೂಲ ನಂಬಿಕೆ ಮೇಲೆ ವಿಶ್ವಾಸವಿರಿಸಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಚಾರ ವಿಚಾರಗಳ ನಿಯಮ ಪಾಲಿಸಿ ಕಠಿಣ ಯಾತ್ರೆಯನ್ನು ಕೈಗೊಳ್ಳುವ ವೃತಧಾರಿಗಳ ಆಂತರಿಕ ಭಾವನೆಗಳಿಗೆ ದೇವರಿಂದ ಪುರಸ್ಕಾರ ಲಭಿಸುವುದು ಎಂದು ಕುಂಟಾರು ರವೀಶ ತಂತ್ರಿವರ್ಯರು ಹೇಳಿದರು.
ಆಲೆಟ್ಟಿಯ ಬಡ್ಡಡ್ಕದಲ್ಲಿ ನಿರ್ಮಾಣಗೊಂಡ ಅಯ್ಯಪ್ಪ ಭಜನಾ ಮಂದಿರದ ಪುನ: ಪ್ರತಿಷ್ಠಾ ಮಹೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಸಂಸ್ಕೃತಿ ಮತ್ತು ಸಂಸ್ಕಾರವನ್ನು ರಫ್ತು ಮಾಡಲು ತಾಕತ್ತು ಹೊಂದಿರುವ ಏಕೈಕ ದೇಶ ಭಾರತ ಎಂದು ಅವರು ಹೇಳಿದರು.
ಸಭಾಧ್ಯಕ್ಷತೆಯನ್ನು ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ|ಎನ್. ಎ.ಜ್ಞಾನೇಶ್ ವಹಿಸಿದ್ದರು. ಅತಿಥಿಗಳಾಗಿ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಕೆ.ಬಾಲಚಂದ್ರ, ಸೇವಾ ಸಮಿತಿ ಅಧ್ಯಕ್ಷ ಕೆ.ಜೆ.ಹರೀಶ, ಗುರುಸ್ವಾಮಿ ಜನಾರ್ಧನ ಗುಂಡ್ಯ, ಶ್ರೀಮತಿ ಶ್ಯಾಮಲಾಜನಾರ್ಧನ ಗೌಡ ಪಿಂಡಿಬನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಶ್ರೀರಕ್ಷಾ, ಅಭಿರಾಮ್ ಪ್ರಾರ್ಥಿಸಿದರು. ಶಿಕ್ಷಕ ವೆಂಕಟ್ರಾಜ್ ಬಿ.ಆರ್. ಸ್ವಾಗತಿಸಿದರು. ಕೋಶಾಧಿಕಾರಿ ಕೆ.ವಿ.ಪ್ರಕಾಶ್ ವಂದಿಸಿದರು.ಈ ಸಂದರ್ಭ ಮಂದಿರದ ನಿರ್ಮಾಣಕ್ಕೆ ಸಹಕರಿಸಿದ ವಿಶೇಷ ದಾನಿಗಳನ್ನು ಗೌರವಿಸಲಾಯಿತು. ನಂತರ ತಾಲೂಕಿನ ವಿವಿಧ ಸಂತ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು.

ಜೀರ್ಣೋದ್ಧಾರ ಕಾರ್ಯದ ನಿಧಿ ಕೂಪನ್ ಡ್ರಾ..ಫಲಿತಾಂಶ

ಅಯ್ಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ನಿಧಿ ಕೂಪನ್ ಏರ್ಪಡಿಸಲಾಗಿತ್ತು. ಇದರ ಡ್ರಾ ವನ್ನು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರವೀಶ ತಂತ್ರಿವರ್ಯರು ಅತಿಥಿಗಳ ಸಮ್ಮುಖದಲ್ಲಿ ನೆರವೇಸಲಾಯಿತು.

 

ಅಯ್ಯಪ್ಪ ಭಜನಾ ಮಂದಿರದ ನಿರ್ಮಾಣಕ್ಕೆ ವಿಶೇಷ ದಾನಿಗಳನ್ನು ಸನ್ಮಾನಿಸಲಾಯಿತು.ಮಂದಿರದ ಸ್ಥಳ ದಾನಿ ಶ್ರೀಮತಿ ವೇದಾವತಿ ಅನಂತ ಬಡ್ಡಡ್ಕ, ಬೆಳ್ಳಿಯ ಉಬ್ಬು ಭಾವಚಿತ್ರದ ದಾನಿಗಳಾದ ಮಧ್ವರಾಜ್ ಕಡಂಬಳಿತ್ತಾಯ, ಗ್ರಾನೈಟ್ ದಾನಿ ವಿಠಲ ನಾಯ್ಕ್ ದೋಣಿಮೂಲೆ, ಮರ ದಾನಿಗಳಾದ ಶ್ಯಾಮಲಾ ಜನಾರ್ಧನ ಪಿಂಡಿಬನ, ಅನ್ನ ದಾನಿಗಳಾದ ಗಿರಿಯಪ್ಪ ನಾಯ್ಕ್ ಎಲಿಕ್ಕಳ, ದಿ.ಕೃಷ್ಣ ಗುರುಸ್ವಾಮಿ ಸ್ಮರಣಾರ್ಥ ಭುವನೇಶ್ವರ ಬಡ್ಡಡ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಕೆ.ಬಾಲಚಂದ್ರ ಮತ್ತು ರೇಖಾ ದಂಪತಿಯನ್ನು ರವೀಶ ತಂತ್ರಿವರ್ಯರು ಸನ್ಮಾನಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.