ವಿಜಯಕರ್ನಾಟಕ ಪತ್ರಿಕೆ ಆಯೋಜಿಸಿದ “ವಿಕ ಜೋಡಿ ತಾರೆ” ಕರ್ನಾಟಕ ಬೆಸ್ಟ್ ಜೋಡಿ ಸ್ಪರ್ಧೆಯಲ್ಲಿ ಸುಳ್ಯದ ಗಾಯಕ ದಂಪತಿ ಕೇರ್ಪಳ ಕೃಷ್ಣರಾಜ್ – ಪೂರ್ಣಿಮಾ ಪ್ರಥಮ ಸ್ಥಾನ ಪಡೆದಿದ್ದಾರೆ.
ಪತಿ, ಪತ್ನಿ ನಡುವಿನ ಸಾಮರಸ್ಯಕ್ಕೆ ಬೆಳಕು ಚೆಲ್ಲುವ ವಿಜಯ ಕರ್ನಾಟಕ ವಿಕ ಜೋಡಿತಾರೆ ಸ್ಪರ್ಧೆಯ ಆರಂಭಿಕ ಆಡಿಷನ್ ನಲ್ಲಿ ಜಿಲ್ಲೆಯಿಂದ ಈ ದಂಪತಿ ಆಯ್ಕೆಗೊಂಡಿದ್ದರು.
ವಿವಿಧ ಜಿಲ್ಲೆಗಳಿಂದ ಆಯ್ಕೆಗೊಂಡ ದಂಪತಿಗಳ ಅಂತಿಮ ಸ್ಪರ್ಧೆ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ, ಪಾಶ್ಚಿಮಾತ್ಯ ಉಡುಗೆ ತೊಡುಗೆ ಮತ್ತು ಪ್ರಶ್ನೋತ್ತರದಲ್ಲಿ ಉತ್ತಮ ನಿರ್ವಹಣೆ ತೋರಿದ ಕೃಷ್ಣರಾಜ್ ಪೂರ್ಣಿಮಾ ದಂಪತಿ ಪ್ರಥಮ ಸ್ಥಾನಿಯಾದರು.
ಸಿನಿತಾರೆಯರಾದ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ದೇವರಾಜ್ ಪ್ರಶಸ್ತಿಯನ್ನು ನೀಡಿದರು.
ಮಿಸೆಸ್ ಇಂಡಿಯಾ ಕರ್ನಾಟಕ ನಿರ್ದೆಶಕಿ ಪ್ರತಿಭಾ ಸೌಂಶಿಮಠ್ ಮತ್ತು ಫಿಟ್ ಇಂಡಿಯಾ ರಾಯಭಾರಿ ವನಿತಾ ಅಶೋಕ್ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.
ಈ ಕಾರ್ಯಕ್ರಮಕ್ಕೆ ಫ್ರೀಡಂ ಆಯಿಲ್ ಹಾಗೂ ಹೀರೋ ಮೋಟಾರ್ಸ್ ಪ್ರಾಯೋಜಕತ್ವವಿತ್ತು.