ಮಾ.9 ಮತ್ತು 11 ರಂದು ಜೀರ್ಣೋದ್ಧಾರ ಕುರಿತು ಪೂರ್ವಭಾವಿ ಸಭೆ ನಡೆಯಲಿದೆ ಹಾಗೂ ಮಾ.14 ರಂದು ಊರವರ ಸಹಯೋಗದೊಂದಿಗೆ ಜೀರ್ಣೋದ್ಧಾರ ಸಮಿತಿ ರಚನೆಯಾಗಲಿದೆ
ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಕುಕ್ಕುಜಡ ಅಮರಮೂಡ್ನೂರು ಗ್ರಾಮದ ವಿಷ್ಣುನಗರ (ಕುಕ್ಕುಜಡ್ಕ) ರಲ್ಲಿ ಪ್ರಾರಂಭಿಸಿ ಈಗ 67 ನೇ ಕಾಲಾವಧಿಯ ಜಾತ್ರೆ ಹಾಗೂ ಶ್ರೀ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮ ಮಾ.9 ರಿಂದ ಮಾ.14ತನಕ ನಡೆಯಲಿದೆ
ಮಾ.9 ರಂದು ಪೂರ್ವಾಹ್ನ , ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ
, ಪೂಜಾ ಪ್ರಸಾದ ಅನ್ನ ಸಂತರ್ಪಣೆ,ಅಪರಾಹ್ನ ರಕ್ತೇಶ್ವರಿ ದೈವದ ಭಂಡಾರ ಹಿಡಿಯುವುದು.
ರಾತ್ರಿ ರಕ್ತೇಶ್ವರಿ ದೈವದ ಸೇವೆ ಪ್ರಾರಂಭವಾಗಲಿದೆ.
ಮಾ.10 ರಾತ್ರಿ ಧರ್ಮಸ್ಥಳ ಪಂಜುರ್ಳಿ ಮತ್ತು ಜಾವತೆ ದೈವಗಳ ಸೇವೆಗಳು ಪ್ರಾರಂಭವಾಗಲಿದೆ.
ಮಾ 11 ಅಪರಾಹ್ನ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹಿಡಿಯುವುದು
ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಟ್ಟು ನಡೆಯಲಿದೆ.
ಮಾ 12 ರಂದು ಶ್ರೀ ವಿಷ್ಣುಮೂರ್ತಿ ದೈವದ ಬಯಲು ಕೊಲ ಶ್ರೀ ದೈವದ ಬಾರಣೆ
ಯಂ.ಪಿ.ಜಿ.ಕೆಯವರ ಅಶ್ವತ್ಥ ವೃಕ್ಷ ಪೂಜೆ ಶ್ರೀ ವಿಷ್ಣುಮೂರ್ತಿ ದೈವದ ಪ್ರಸಾದ ಸೇವೆ ,
ಶ್ರೀ ವಿಷ್ಣುಮೂರ್ತಿ ದೈವದ ಕ್ಷೀರ ಸೇವನೆ ಮಾಯ್ಪಡ್ಕದಲ್ಲಿ ಮನೆಯವರಿಂದ ಶ್ರೀ ವಿಷ್ಣುಮೂರ್ತಿ ದೈವದ ಪ್ರಸಾದ ವಿತರಣೆ ನಡೆಯಲಿದೆ. ಮಾರಿಕಳ, ಶ್ರೀ ದೈವಗಳ ಸೇವೇಗಾರರ ಗೌರವ ಧನ ಪಾವತಿಗಳು ಕಾರ್ಯಕ್ರಮ ನಡೆಯಲಿದೆ.
ಮಾ.13 ರಾತ್ರಿ ಮಂತ್ರವಾದಿ ಮತ್ತು ರಕ್ತೇಶ್ವರಿ ಗುಳಿಗ ದೈವಗಳ ಸೇವೆ ನಡೆಯಲಿದೆ.
ಮಾ. 14 ಪೂರ್ವಾಹ್ನ ಸಂಕ್ರಮಣ ಪೂಜೆ ,ರಾತ್ರಿ ಕಲ್ಲುರ್ಟಿ ಮತ್ತು ಕಲ್ಕುಡ ದೈವಗಳು ಹಾಗೂ ಅಂಗಾರ ಬಾಕುಡ ಸೇವೆ ನಡೆಯಲಿದೆ ಎಂದು ಎಂ.ಜಿ.ಸತ್ಯನಾರಾಯಣ ವ್ಯವಸ್ಥಾಪಕರು ಅಡಳಿತ ಹಾಗೂ ಮಂಡಳಿಯವರು ತಿಳಿಸಿದ್ದಾರೆ.