ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಹಾಗೂ ಶ್ರೀ ಶಿವಪಂಚಾಕ್ಷರಿ ಭಜನಾ ಮಂಡಳಿ ವತಿಯಿಂದ ಅರ್ಧ ಏಕಾಹ ಭಜನೆಯು ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾ. 11 ರಂದು ನಡೆಯಲಿದೆ. ಪೂ.ಗಂಟೆ 8.30ಕ್ಕೆ ಗಣಪತಿ ಹವನ, ಪೂ.1೦ಕ್ಕೆ ಏಕಾದಶಿ ರುದ್ರಾಭಿಷೇಕ ಮತ್ತು ಸಂಕಲ್ಪ ಬಿಲ್ವಾರ್ಚನೆ ಸೇವೆಯ ನಂತರ ಮಧ್ಯಾಹ್ನ 12.೦೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.4೦ರಿಂದ ಅರ್ಧ ಏಕಾಹ ಭಜನೆಯ ದೀಪಾರಾಧನೆ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನರವರಿಂದ ನಡೆಯಲಿದೆ. ಮಾ.12 ಸೂರ್ಯೋದಯ 6.41 ಕ್ಕೆ ಮಂಗಳಾರ್ಪಣೆ, ದೀಪ ವಿಸರ್ಜನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.